janadhvani

Kannada Online News Paper

ಸೌದಿ ವಲಸಿಗರಿಗೆ ಶುಭ ಸುದ್ದಿ: ಮರುಪ್ರವೇಶ ಅವಧಿಯೊಳಗೆ ಹಿಂದಿರುಗದವರ ಪ್ರವೇಶ ನಿಷೇಧ ತೆರವು

ರೀ ಎಂಟ್ರಿಯ ಅವಧಿಯೊಳಗೆ ಸೌದಿ ಅರೇಬಿಯಾಕೆ ಹಿಂದಿರುಗದವರಿಗೆ ಮೂರು ವರ್ಷಗಳ ಪ್ರವೇಶ ನಿರ್ಬಂಧವನ್ನು ಏರ್ಪಡಿಸಲಾಗಿತ್ತು.

ರಿಯಾದ್: ರೀ ಎಂಟ್ರಿ ವೀಸಾದಲ್ಲಿ ಸೌದಿ ಅರೇಬಿಯಾವನ್ನು ತೊರೆದು ಅವಧಿಯೊಳಗೆ ಹಿಂದಿರುಗದವರ ಪ್ರವೇಶ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದಲ್ಲಿದ್ದು, ನಂತರ ಎಕ್ಸಿಟ್ ಮತ್ತು ರೀ ಎಂಟ್ರಿ ವೀಸಾದಲ್ಲಿ ದೇಶವನ್ನು ತೊರೆದು ಅವಧಿಯೊಳಗೆ ಹಿಂದಿರುಗದ ಕಾರ್ಮಿಕರಿಗೆ ಮರು ಪ್ರವೇಶಕ್ಕೆ ಅನುಮತಿಸುವಂತೆ ಪಾಸ್‌ಪೋರ್ಟ್‌ಗಳ ಜನರಲ್ ಡೈರೆಕ್ಟರೇಟ್(ಜವಾಝಾತ್) ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮತ್ತು ಬಂದರುಗಳಿಗೆ ಸೂಚನೆ ನೀಡಿದೆ.ಇದು ನಿನ್ನೆಯಿಂದ ಜಾರಿಗೆ ಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರೀ ಎಂಟ್ರಿಯ ಅವಧಿಯೊಳಗೆ ಸೌದಿ ಅರೇಬಿಯಾಕೆ ಹಿಂದಿರುಗದವರಿಗೆ ಮೂರು ವರ್ಷಗಳ ಪ್ರವೇಶ ನಿರ್ಬಂಧವನ್ನು ಏರ್ಪಡಿಸಲಾಗಿತ್ತು. ಇದೀಗ ಅದನ್ನು ತೆರವುಗೊಳಿಸಲು ನಿರ್ಧರಿಸಿದ್ದು, ಬಹುತೇಕ ವಲಸಿಗರಿಗೆ ಸಂತಸವನ್ನುಂಟು ಮಾಡಿದೆ.

ಸೌದಿ ಉದ್ಯಮಿಗಳ ಕೋರಿಕೆಯ ಮೇರೆಗೆ ಜವಾಝಾತ್, ಮರುಪ್ರವೇಶದ ಅವಧಿಯೊಳಗೆ ಹಿಂತಿರುಗದವರಿಗೆ ಮೂರು ವರ್ಷಗಳ ಕಾಲ ಪ್ರವೇಶವನ್ನು ನಿಷೇಧಿಸಿತ್ತು. ಮರುಪ್ರವೇಶದ ಅವಧಿಯಲ್ಲಿ ಕಾರ್ಮಿಕರು ಹಿಂತಿರುಗದಿರುವುದು ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಭಾರಿ ನಷ್ಟವನ್ನು ಉಂಟುಮಾಡಿತ್ತು. ಇದನ್ನು ಗಣನೆಗೆ ತೆಗೆದುಕೊಂಡು ಪ್ರವೇಶ ನಿಷೇಧಿಸಬೇಕೆಂಬ ಉದ್ಯಮಿಗಳ ಬೇಡಿಕೆಯನ್ನು ಅಂಗೀಕರಿಸಲಾಗಿತ್ತು.

ಈ ಹಿಂದೆ, ವಿದೇಶದಲ್ಲಿರುವವರ ಮರು-ಪ್ರವೇಶವನ್ನು ವಿಸ್ತರಿಸಲು ಯಾವುದೇ ಮಾರ್ಗವಿರಲಿಲ್ಲ. ಈಗ ವಿದೇಶದಲ್ಲಿರುವವರ ಮರು ಪ್ರವೇಶವನ್ನು ಆನ್‌ಲೈನ್‌ನಲ್ಲಿ ವಿಸ್ತರಿಸುವ ವ್ಯವಸ್ಥೆ ಸಿದ್ಧಪಡಿಸಲಾಗಿದೆ.

error: Content is protected !! Not allowed copy content from janadhvani.com