janadhvani

Kannada Online News Paper

ಸೌದಿ: ಮಂಗಳೂರಿನ ಕಂದಕ್ ಉಮೈರಾ ಬಾನು ಅಲ್ ಹಸ್ಸಾದಲ್ಲಿ ನಿಧನ

ದಮ್ಮಾಮ್,ಜ.13: ಅಲ್ ಹಸ್ಸಾದಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಮಂಗಳೂರಿನ ಮಹಿಳೆಯೋರ್ವರು ಮೃತಪಟ್ಟಿದ್ದಾರೆ.

ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಳಗೊಂಡ ಪರಿಣಾಮ ಉಮೈರಾ ಬಾನು(47) ಅವರನ್ನು ಅಲ್ ಹಸ್ಸಾದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಕಂದಕ್ ಮೂಲದವರಾದ ಅವರು, ಪತಿ ಹಾಗೂ ಎರಡು ಮಕ್ಕಳನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆಯನ್ನು ನಾಳೆ ಳುಹರ್ ನಮಾಜಿನ ಬಳಿಕ ಅಲ್ ಹಸ್ಸಾದಲ್ಲಿ ನೆರವೇರಿಸಲಾಗುವುದೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.