janadhvani

Kannada Online News Paper

ಕೆ ಪಿ ಬೈಲ್ ನಲ್ಲಿ SYS 30ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಂಗಮ

ಕೊಳ್ನಾಡು: KMJ, SYS , SSF ಕೆ ಪಿ ಬೈಲ್ ಇದರ ವತಿಯಿಂದ ದಿನಾಂಕ : 14-1-2024 ರಂದು ಮಹ್ಳರುತುಲ್ ಬದ್ರಿಯ್ಯಾ ವಾರ್ಷಿಕ ಹಾಗೂ SYS 30 ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಂಗಮವು ಮುತ್ತಲಿಬ್ ಹಾಜಿ ಇವರ ಅಧ್ಯಕ್ಷತೆಯಲ್ಲಿ ಕೆ ಪಿ ಬೈಲ್ ಮಸ್ಜಿದ್ ಅಹ್ಮದುಲ್ ಬದವಿ ವಠಾರದಲ್ಲಿ ನಡೆಯಲಿದೆ.

ಸಿ ಹೆಚ್ ಮುಹಮ್ಮದಾಲಿ ಸಖಾಫಿ ಅಶ್ ಅರಿಯ್ಯ ಉದ್ಘಾಟಿಸಲಿದ್ದಾರೆ.ಅಸ್ಸಯ್ಯದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಅ ನೆರವೇರಿಸಲಿದ್ದಾರೆ.ಮಹ್ಳರುತುಲ್ ಬದ್ರಿಯ್ಯಾ ನೇತೃತ್ವ ಹಸೀಬ್ ರಹ್ಮಾನ್ ಮದನಿ
ರಝಾಕ್ ಅಂಮ್ಜದಿ ಸ್ವಾಗತಿಸಲಿದ್ದಾರೆ.
ಕೆ.ಜಿ.ಯನ್ ಮುದರ್ರಿಸ್ ಹುಸೈನ್ ಮುಈನಿ ಮುಖ್ಯ ಪ್ರಭಾಷಣಗೆಯ್ಯಲಿದ್ದಾರೆ.
ಅತಿಥಿಗಳಾಗಿ :- ಮಹಮ್ಮೂದ್ ಸಅದಿ ಬಾರೆಬೆಟ್ಟು, ಎಸ್ .ಎ ಇಬ್ರಾಹೀಂ ಸಖಾಫಿ ಸೆರ್ಕಳ, ಅಶ್ರಫ್ ಸಅದಿ ಕೆ ಪಿ ಬೈಲ್ , ಅಬ್ದುಲ್ ರಝಾಕ್ ಮದನಿ ಕೆ ಪಿ ಬೈಲ್, ಸಿ.ಹೆಚ್ ಅಬೂಬಕ್ಕರ್, ಅಬ್ದುಲ್ಲಾ ನಾರಂಕೋಡಿ, ಯಾಕೂಬ್ ಕೆ ಪಿ ಬೈಲ್, ಹೈದರ್ ಆಲಿ ಕೆ ಪಿ ಬೈಲ್, ಹಮೀದ್ ಕುಲ್ಯಾರ್, ರಝಾಕ್ ಸಿ.ಹೆಚ್, ಹಮೀದ್ ಸುರಿಬೈಲ್, ಝಕರಿಯಾ ನಾರ್ಶ, ಅಶ್ರಫ್ ನಾರ್ಶ ಹಾಗೂ ಇನ್ನಿತರ ಉಲಮಾ ಉಮರುಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮ್ಯಾನ್ ಇಬ್ರಾಹೀಂ ಕರೀಂ ಕದ್ಕಾರ್ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com