ದಮ್ಮಾಮ್: ಕರ್ನಾಟಕ ಮರ್ಕಝ್ ಎಂದೇ ಪ್ರಖ್ಯಾತ ಮರ್ಹೂಂ ಶರಫುಲ್ ಉಲಮ ಅಬ್ಬಾಸ್ ಉಸ್ತಾದರ ಪುಣ್ಯ ಹಸ್ತಗಳಿಂದ ಸ್ಥಾಪಿತವಾದ ಧಾರ್ಮಿಕ ಲೌಕಿಕ ಮಹಾ ಸಂಸ್ಥೆ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಮುವತ್ತನೇ ವಾರ್ಷಿಕ ಪ್ರಚಾರ ಸಭೆಯು ಸೌದಿ ಅರೇಬಿಯಾ ಈಸ್ಟನ್ ಪ್ರೋವಿನ್ಸ್ ಸಮಿತಿ ವತಿಯಿಂದ ಅದ್ದೂರಿಯಾಗಿ ಜನವರಿ 5 ರಂದು ದಮ್ಮಾಮ್ ಅಲ್-ರಯ್ಯಾನ್ ಪಾಲಿಕ್ಲಿನಿಕ್ ಹಾಲಿನಲ್ಲಿ ನಡೆಯಿತು.
ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ಎಮ್ಮೆಮಾಡು’ರವರ ಭಕ್ತಿ ನಿರ್ಭರವಾದ ದುಆ’ದೊಂದಿಗೆ ಪ್ರಾರಂಭಗೊಂಡ ಸಮಾವೇಶವನ್ನು ಕರ್ನಾಟಕ ರಾಜ್ಯ SYS ಉಪಾಧ್ಯಕ್ಷರಾದ ಬಷೀರ್ ಸಅದಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಹಮ್ಮದ್ ಕುಞಿ ಅಂಜದಿ ಅಲ್-ಅರ್ಷದಿ’ಯವರು ಮುವತ್ತನೇ ವಾರ್ಷಿಕ ಮತ್ತು ಸಂಸ್ಥೆಯ ಬಹುಮುಖ ಯೋಜನೆಗಳ ಬಗ್ಗೆ ಸವಿಸ್ತರವಾಗಿ ವಿವರಿಸಿದರು…
ಈಸ್ಟನ್ ಪ್ರೋವಿನ್ಸ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಪು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಯ್ಯದ್ ಶುಕ್ಕೂರ್ ತಙಳ್ ಕಾಸರಗೋಡು, D.P ಯೂಸುಫ್ ಸಖಾಫಿ ಬೈತಾರ್ (ಅಧ್ಯಕ್ಷರು ಕೆ ಸಿ ಎಫ್ ಅಂತರರಾಷ್ಟ್ರೀಯ ಸಮಿತಿ) ಹಾಜಿ: N.S. ಅಬ್ದುಲ್ಲ (ಗೌರವಾಧ್ಯಕ್ಷರು ಅಲ್-ಮದೀನ ಸೌದಿ ರಾಷ್ಟ್ರೀಯ ಸಮಿತಿ) ಅಬ್ದುಲ್ ರಹ್ಮಾನ್ ಮದನಿ (ಅಧ್ಯಕ್ಷರು ಅಲ್-ಮದೀನ ಸೌದಿ ರಾಷ್ಟ್ರೀಯ ಸಮಿತಿ) ಮುಹಮ್ಮದ್ ಕುಞಿ ಅಮಾನಿ (ಐ ಸಿ ಎಫ್ ದಮ್ಮಾಮ್ ಸೆಂಟ್ರಲ್ ದಾಯಿ) ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು..
ವೇದಿಕೆಯಲ್ಲಿ ಬಫೀರ್ ತೋಟಾಲ್ (ಕಾರ್ಯದರ್ಶಿ ಅಲ್-ಮದೀನ ಸೌದಿ ರಾಷ್ಟ್ರೀಯ ಸಮಿತಿ) ರಷೀದ್ ಸಖಾಫಿ (ಚೆಯರ್ಮೇನ್ ಕೆ ಸಿ ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ) ಅಝೀಝ್ ಮುಸ್ಲಿಯಾರ್ ಕುತ್ತಾರ್, ಅಬೂಬಕ್ಕರ್ ಮುಸ್ಲಿಯಾರ್ (ಆರ್ಗನೈಸರ್ ಅಲ್-ಮದೀನ) ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಲ್-ಮದೀನ ಸೌದಿ ಈಸ್ಟನ್ ಪ್ರೋವಿನ್ಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕೊಡಗು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಕೊನೆಯಲ್ಲಿ ಕಾರ್ಯದರ್ಶಿ ಇಬ್ರಾಹೀಂ ಚೋಕಾ ವಂದನಾರ್ಪಣೆ ನಿರ್ವಹಿಸಿದರು..
ವರದಿ :ಆಬಿದ್ ಕೊಡಗು