janadhvani

Kannada Online News Paper

ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್- ಅಶಕ್ತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ

ಉಡುಪಿ: ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ (ರಿ) ಬೆಳ್ವೆ ಇವರು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಉಡುಪಿ ಜಿಲ್ಲೆ ಮಲ್ಪೆಯ ಉನ್ನತ ವ್ಯಾಸಂಗ ಮಾಡುತ್ತಿರುವ ಅಶಕ್ತ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ ಸಾಸ್ತಾನ ಸಾಗರ್ ಪ್ಲಾಜಾ ಸಭಭವನದಲ್ಲಿ ನಡೆಯಿತು.

ಈ ಸರಳ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರು ಹಾಗು ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ ಬೆಳ್ವೆ ಇದರ ಅಧ್ಯಕ್ಷ ರಾದ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದರು. ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಎನ್. ಎನ್. ಓ ಜಿಲ್ಲಾ ಖಜಾಂಚಿ ನಕ್ವಯಾಯ್ಯ ಸಹಾಯಧನ ನೀಡಿದರು.

ಈ ಸಮಾರಂಭದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಟಿ ಎಮ್ ಎಚ್ ಟ್ರಸ್ಟೀ ಹುಸೇನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ,ಪೀರ್ ಸಾಹೇಬ್ ಉಡುಪಿ. ಅರ್ಫಾತ್ ಅಲ್ಬಾಡಿ,
ಎನ್. ಎನ್. ಓ ಕುವೈಟ್ ಅಧ್ಯಕ್ಷ ಆಶ್ರಫ್ ಹಂಗಾರಕಟ್ಟೆ ,ನಮ್ಮ ನಾಡ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಶಾಕಿರ್ ಹಾವಂಜೆ. ಸಾದಿಕ್ ಉಸ್ತಾದ್.ಬ್ರಹ್ಮಾವರ ಘಟಕದ ಉಸ್ತುವಾರಿ ಅಬ್ದುಲ್ ಮುನಾಫ್ ಹಂಗಾರಕಟ್ಟೆ. ಜಿಲ್ಲಾ ಜೊತೆ ಕಾರ್ಯದರ್ಶಿ ಸುಹಾನ್ ಸಾಸ್ತಾನ್. ಜಿಲ್ಲಾ ಸದಸ್ಯರಾದ ಹಾರುನ್ ರಶೀದ್ ಸಾಸ್ತಾನ್. ಬ್ರಹ್ಮಾವರ ಘಟಕದ ಅಧ್ಯಕ್ಷ ತಾಜುದ್ದೀನ್,
ಉಡುಪಿ ಘಟಕದ ಅಧ್ಯಕ್ಷ ನಝಿರ್ ನೆಜಾರ್ ಸಾಗರ್ ಪ್ಲಾಜ ಇದರ ಮಾಲಕರಾದ ಬಿಲಾಲ್ ಸಾಗರ್ ಇನ್ನಿತರರು ಉಪಸ್ಥಿತರಿದ್ದರು.