janadhvani

Kannada Online News Paper

SYS 30ನೇ ವಾರ್ಷಿಕೋತ್ಸವದ ಪ್ರಚಾರ ಸಭೆ ಹಾಗೂ ನೇತಾರರಿಗೆ ಸನ್ಮಾನ ಸಮಾರಂಭ

SYS 30ನೇ ವಾರ್ಷಿಕೋತ್ಸವದ ಪ್ರಚಾರ ಸಭೆ ಹಾಗೂ ನೇತಾರರಿಗೆ ಸನ್ಮಾನ ಸಮಾರಂಭ
ರಿಯಾದ್: “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬ ಧ್ಯೇಯ ವಾಕ್ಯದ SYS 30ನೇ ವಾರ್ಷಿಕೋತ್ಸವದ ಪ್ರಚಾರ ಸಭೆ ಹಾಗೂ ನೇತಾರರಿಗೆ ಸನ್ಮಾನ ಸಮಾರಂಭ ತಾ: 28-12-2023 ಗುರುವಾರ ರಾತ್ರಿ 10 ಗಂಟೆಗೆ ಕೆ.ಸಿ.ಎಫ್ ಸೆಂಟರ್ ಬತ್ತಾದಲ್ಲಿ ನಡೆಯಿತು.

SYS ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಬಶೀರ್ ಸಅದಿ ಬೆಂಗಳೂರು ಸಭೆಯನ್ನು ಉದ್ಘಾಟಿಸಿ SYS 30 ನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ಸಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ಮುಖ್ಯ ಭಾಷಣ ಮಾಡಿ ದುಆಕ್ಕೆ ನೇತೃತ್ವ ನೀಡಿದರು, K.H ಇಸ್ಮಾಯಿಲ್ ಸಅದಿ ಆಶಂಸ ಬಾಷಣ ಮಾಡಿದರು, ಅತಿಧಿಗಳಿಗೆ ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನಲ್ ಅಧ್ಯಕ್ಷ ಮುಸ್ತಫಾ ಸಅದಿ ವಹಿಸಿದ್ದರು. ಸನಯ್ಯ ಸೆಕ್ಟರ್ ಅಧ್ಯಕ್ಷ ಹಂಝ ಉಸ್ತಾದ್ ಚೋಕಂಡಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ರಾಷ್ಟ್ರೀಯ ನೇತಾರ ಸಿದ್ದೀಕ್ ಸಖಾಫಿ ಸ್ವಾಗತ ಭಾಷಣ ಮಾಡಿದರೆ, ಝೋನಲ್ ಸಂಘಟನಾ ಅಧ್ಯಕ್ಷ ನಝೀರ್ ಕಕ್ಕಿಂಜೆ ಕೊನೆಯಲ್ಲಿ ಧನ್ಯವಾದಗೈದರು.

error: Content is protected !! Not allowed copy content from janadhvani.com