ಅಸಭ್ಯ ಭಾಷೆಯಲ್ಲಿ ಮಹಿಳೆಯರನ್ನು ನಿಂದಿಸಿದ ಹಾಗೂ ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಸುನ್ನೀ ಸಂಘಟನೆಗಳ ಒಕ್ಕೂಟ X ಟ್ವೀಟ್ ಕ್ಯಾಂಪೈನ್ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪೋಲೀಸ್ ಅಧಿಕಾರಿಗಳಿಗೆ ತಮ್ಮ ಸಂದೇಶ ತಲುಪಿಸುವ ಪ್ರಯತ್ನ ಮಾಡಿತು.
ಸಾವಿರಾರು ಮಂದಿ #arrestkalladkaprabhakarBhat ಎಂಬ ಹ್ಯಾಷ್ ಟ್ಯಾಗ್ ಮೂಲಕ ಸರ್ಕಾರದೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ ಹಲವು ದಶಕಗಳಿಂದ ಕರಾವಳಿಯಲ್ಲಿ ದ್ವೇಷ ಭಾಷಣಗಳ ಮೂಲಕ ಹಲವಾರು ಬಾರಿ ಸಮಾಜದ ಸ್ವಾಸ್ಥ್ಯ ಕೆಡಿಸಿದ ವ್ಯಕ್ತಿಯು, ಯಾವುದೇ ಕಾನೂನಿನ ಭಯವಿಲ್ಲದೆ ತನ್ನ ಚಾಳಿ ಮುಂದುವರೆಸಿದ್ದು, ಸರ್ಕಾರಗಳ ಮೌನವೇ ಪ್ರಮುಖ ಕಾರಣವೆಂದು ಹಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವುದು ಕಂಡುಬಂತು.https://twitter.com/statekmj29/status/1739987064605798568?t=KXevD_NtOR73D7y_EldW7Q&s=19
https://twitter.com/ssfkarnataka/status/1739989468579516486?t=lMIRVZVfTHdBLoqoYczlhA&s=19