ವಿಟ್ಲ: ಇಲ್ಲಿನ ಪಡ್ನೂರು ಗ್ರಾಮದ ಮದಕ ಎಂಬಲ್ಲಿ ಬಹು ಅಸ್ಸಯ್ಯಿದ್ ಸಿಹಾಬುದ್ಧಿನ್ ತಂಙಳ್ ನೇತೃತ್ವದಲ್ಲಿ ವರ್ಷಂಪ್ರತಿ ನಡೆಸಿ ಕೊಂಡು ಬರುತ್ತಿರುವ 6 ನೆ ಜಲಾಲಿಯ್ಯಾ ಮಜ್ಲಿಸ್ ನಾಳೆ ರಾತ್ರಿ 6.30 ಕ್ಕೆ ಜರಗಳಿದೆ.
ಹಲವಾರು ಪ್ರಮುಖ ವಿದ್ವಾಂಸರು, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು SMA ರಾಜ್ಯ ನಾಯಕರಾದ ಹಾಜಿ ಹಮೀದ್ ಕೊಡಂಗಾಯಿ ಪತ್ರಿಕಾ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.