janadhvani

Kannada Online News Paper

ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ 28ನೇ ರಕ್ತದಾನ ಶಿಬಿರ

ಜಿಸ್ತಿ ಕಮಿಟಿ ಸುನ್ನೀ ಮಹಲ್ ಕೈಯ್ಯೂರ್ KMJ, SYS, SSF ಮಂಚಿ ಕೊಳ್ನಾಡು ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸುನ್ನಿ ಮಹಲ್ ಅಜ್ಮೀರ್ ಆಂಡ್ ನೇರ್ಚೆ ಪ್ರಚಾರಾರ್ಥಕವಾಗಿ ಅಕ್ಷಯ ಬ್ಲಡ್ ಡೋನರ್ಸ್ ಇದರ 28ನೇ ರಕ್ತದಾನ ಶಿಬಿರವು ದಿನಾಂಕ: 24-12-2023 ರಂದು ಸುನ್ನೀ ಮಹಲ್ ಕೈಯ್ಯೂರ್ ,ಮಂಚಿಯಲ್ಲಿ ಸಿ.ಯಂ ಅಬೂಬಕ್ಕರ್ ಲತೀಫ್ ಎಣ್ಮೂರು ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಡಾ. ಲಯನ್ ಗೋಪಾಲ ಆಚಾರ್ಯ ಇವರು ಉದ್ಘಾಟಿಸಿದರು.
ಈ ರಕ್ತದಾನ ಶಿಬಿರದಲ್ಲಿ 49 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರನ್ನು ಸನ್ಮಾನಿಸಲಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದು ಮಾತ್ರವಲ್ಲ ಬದಲಾಗಿ ಅದು ಈ ಜಗತ್ತಿನಲ್ಲಿ ಮಾನವೀಯತೆಯನ್ನು ನೆನಪಿಸುತ್ತದೆ. ನಮ್ಮಿಂದ ರಕ್ತದಾನ ಮಾಡುವುದಕ್ಕೆ ಸಾಧ್ಯವಿದೆ ಎಂದಾದರೇ ನಾವದನ್ನು ಮಾಡಲೇಬೇಕು.
ಶ್ರೇಷ್ಟವಾದ ರಕ್ತದಾನದಿಂದ ಜೀವಕ್ಕೆ ಸ್ಪಂದಿಸು ಮನುಜ! ರಕ್ತದಾನವ ಮಾಡುವ ಮನುಜ! ಒಂದು ಹನಿ ನೀರು ಕೊಟ್ಟರೆ ಜೀವ ಉಳಿಸಬಹುದು! ಆದರೆ ಒಂದು ಹನಿ ರಕ್ತದಾನದಿಂದ ಜೀವವನ್ನು ಬೆಳಗಿಸಬಹುದು.ಯಾವುದೇ ಜಾತಿ ಭೇದವನ್ನು ಲೆಕ್ಕಿಸದೇ ನೀವು ದಾನ ಮಾಡಿದ ಪ್ರತಿಯೊಂದು ರಕ್ತದ ಹನಿ ಒಂದು ಜೀವಕ್ಕೆಉಡುಗೊರೆಯಾಗುತ್ತದೆ ವಿನಃ ರಕ್ತ ಎಲ್ಲಿಯೂ ವ್ಯಾಪರೀಕರಣ ಆಗುವುದಿಲ್ಲ. ರಕ್ತದಾನವು ಜೀವ ಉಳಿಸುವಂತಹ ಮಹತ್ವವಾದ ಕಾರ್ಯಕ್ರಮವಾಗಿದೆ. ಅದನ್ನು ಮನಗಂಡು ಅಕ್ಷಯ ಚಾರಿಟೇಬಲ್ ಟ್ರಸ್ಟ್ ನಿರಂತರವಾಗಿ ಅಲ್ಲಲ್ಲಿ ರಕ್ತದಾನ ಶಿಬಿರವನ್ನು ಮಾಡಿಕೊಂಡು ಬರುತ್ತಾ ಇದೆ ಎಂದರು.

ಕೆಪಿಸಿಸಿ ಸದಸ್ಯರು ಮತ್ತು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಗೌರವಧ್ಯಕ್ಷರಾದ ಯಂ. ಎಸ್ ಮಹಮ್ಮದ್, ದ.ಕ. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಅಬ್ಬಾಸ್ ಅಲಿ ಬೊಳಂತೂರು, ಮಂಚಿ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಲಯನ್ಸ್ ಕ್ಲಬ್ ಬಪ್ಪನಾಡು ವಲಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಸದಸ್ಯರಾದ ಬಾಸ್ಕರ ಕಾಂಚನ್, ಜಗಮೋಹನ್ ಮುಲ್ಕಿ , ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲಾ ಇದರ ಅಧ್ಯಕ್ಷರಾದ ಝಕರಿಯಾ ನಾರ್ಶ, SYS ಮಂಚಿ ಸ್ವಾಂತ್ವಾನ ಕಾರ್ಯದರ್ಶಿ ಹಂಝ ಮಂಚಿ, ಸುನ್ನಿ ಮಹಲ್ ಮುದರ್ರಿಸ್ ಸಾಲಿಂ ಸಅದಿ, ಸುನ್ನಿ ಮಹಲ್ ಸಂಸ್ಥೆಯ ಕಾರ್ಯದರ್ಶಿ ರಝಾಕ್ ಭಾರತ್ , ಕೆಪಿಸಿಸಿ ಸಂಯೋಜಕರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯೂತ್ ಕಾಂಗ್ರೆಸ್ ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಇಬ್ರಾಹೀಂ ನವಾಝ್ ಬಡಕಬೈಲು ಮಂಚಿ ಕೊಲ್ನಾಡು ಜುಮಾ ಮಸೀದಿ ಖತೀಬರಾದ ಅಬ್ದುಲ್ ರಝಾಕ್ ಸಖಾಫಿ, SSF ಮಾಜಿ ದ.ಕ. ಜಿಲ್ಲಾ ಸದಸ್ಯರಾದ ಅಸ್ಲಂ ಪಂಜಿಕಲ್ಲು, SSF ಬಂಟ್ವಾಳ ಡಿವಿಜನ್ ಕಾರ್ಯದರ್ಶಿಯಾದ ಲುಕ್ಮಾನ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಬ್ರಾಹೀಂ ಮಂಚಿ, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಸುರಿಬೈಲ್, ಅನ್ಸಾರ್ ಬಿ.ಜಿ., ಸಾಲೆತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹಸೈನಾರ್ ಕಟ್ಟತ್ತಿಲ, ಜಮೀಯ್ಯತುಲ್ ಉಲಮಾ ಬಂಟ್ವಾಳ ಝೋನ್ ಕಾರ್ಯದರ್ಶಿ ರಫೀಕ್ ಝುಹುರಿ ಮಂಚಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮ್ಮರ್ ,ಝುಬೈರ್ ಸಂಪಿಲ, ಸಾದಿಕ್ ನಾರ್ಶ, ಉಪ್ಪ ಕುಂಞ ಕುಲ್ಯಾರ್, ಹಾಗೂ ಶರೀಫ್ ಕುಲ್ಯಾರ್ ಅತಿಥಿಗಳಾಗಿ ಭಾಗವಹಿಸಿದರು. ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಇವರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com