SჄS ಉಜಿರೆ ಸರ್ಕಲ್ ಆಶ್ರಯದಲ್ಲಿ ಕರ್ನಾಟಕ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ 30ನೇ ವರ್ಷಾಚರಣೆಯ ಪ್ರಚಾರ ಪ್ರಯುಕ್ತ BUILD-UP 2K23 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SჄS ಉಜಿರೆ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ ವಹಿಸಿದ್ದರು. ಮಾಚಾರು ಜುಮಾ ಮಸ್ಜಿದ್ ಖತೀಬರಾದ ಮುಹಮ್ಮದ್ ರಫೀಖ್ ಸಖಾಫಿ ಅಲ್ ಹಿಕಮಿ ಉದ್ಘಾಟನೆ ಮಾಡಿದರು. SჄS ರಾಜ್ಯ ಸದಸ್ಯರಾದ ಹಂಝ ಮದನಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ನಡೆಸಿದರು. SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಮಾಚಾರು ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಸಯ್ಯಿದ್ S.M ಕೋಯ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಅಧ್ಯಕ್ಷರಾದ ಹಾಜೀ ಹೈದರ್ ಮದನಿ ಉಜಿರೆ, ಕೋಶಾಧಿಕಾರಿ ಹಂಝ ಮಾಚಾರು, ಉಪಾಧ್ಯಕ್ಷರಾದ ಉಮರ್‌ಕುಂಞಿ ನಾಡ್ಜೆ, ಸುನ್ನೀ ಮ್ಯಾನೇಜ್ಮೆಂಟ್ ಉಜಿರೆ ರೀಜಿನಲ್ ಅಧ್ಯಕ್ಷರಾದ ಮುಹಿಯುದ್ದೀನ್ ನಜಾತ್ ಉಜಿರೆ, ಕೋಶಾಧಿಕಾರಿ ಹನೀಫ್ ಮುಸ್ಲಿಯಾರ್ ನಿಡಿಗಲ್, ಮಾಚಾರು ಜುಮಾ ಮಸ್ಜಿದ್ ಅಧ್ಯಕ್ಷರಾದ ಬಿ.ಎಂ ಇಲ್ಯಾಸ್, SჄS ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ, ಸದಸ್ಯರಾದ ಅಝೀಝ್ ಕಾಜೂರು, SჄS ಮುಂಡಾಜೆ ಸರ್ಕಲ್ ಅಧ್ಯಕ್ಷರಾದ ಮುಸ್ರಫಾ ಸಅದಿ ಕಕ್ಕಿಂಜೆ, SჄS ಉಜಿರೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಅತ್ತಾಜೆ, SSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು ಇಸ್ಮಾಯಿಲ್ ಸಖಾಫಿ ಮಾಚಾರು, ಬೆಳಾಲು ಜುಮಾ ಮಸ್ಜಿದ್ ಖತೀಬ್ ಬದ್ರುದ್ದೀನ್ ಸಖಾಫಿ SYS ಮಾಚಾರು ಯುನಿಟ್ ಅಧ್ಯಕ್ಷ ಇಲ್ಯಾಸ್ ಮದನಿ, ಹಾಗೂ SჄS ಉಜಿರೆ ಸರ್ಕಲ್ ಉಪಾಧ್ಯಕ್ಷರಾದ ಖಾಲಿದ್ ಕಕ್ಯಾನ ದಅ್‌ವಾ ಕಾರ್ಯದರ್ಶಿ ಸಲೀಂ ನಿಡಿಗಲ್, ಇಸಾಬ ಕಾರ್ಯದರ್ಶಿ ಸಲೀಂ ಮಾಚಾರು, ಸಾಂತ್ವನ ಕಾರ್ಯದರ್ಶಿ ಅಶ್ರಫ್ MH ಉಜಿರೆ, ಸೋಷಿಯಲ್ ಕಾರ್ಯದರ್ಶಿ ಶರೀಫ್ ಬೆಳಾಲು ಹಾಗೂ ಸರ್ಕಲ್ ಹಾಗೂ ಯುನಿಟ್ ನಾಯಕರು ಪ್ರತಿನಿಧಿಗಳು ಹಾಗೂ 7 ಯುನಿಟ್‌ಗಳ 180 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. SჄS ಉಜಿರೆ ಸರ್ಕಲ್ ಕೋಶಾಧಿಕಾರಿ ಹಾತಿಬ್ ಉಜಿರೆ ಸ್ವಾಗತಿಸಿ ದನ್ಯವಾದ ಸಮರ್ಪಿಸಿದರು.