janadhvani

Kannada Online News Paper

ಕೆಸಿಎಫ್ ಬಹರೈನ್: ಯಶಸ್ವೀ ರಿಫಾಈ ದಫ್ ರಾತೀಬ್ ಮಜ್ಲಿಸ್

ಮನಾಮ: ಆತ್ಮ ಜ್ಞಾನಿಗಳ ಚಕ್ರವರ್ತಿ ಶೈಖ್ ರಿಫಾಈ (ರ.ಅ) ರವರ ಸ್ಮರಣೆಯ ಅಂಗವಾಗಿ ನಡೆದ ರಿಫಾಈ ದಫ್ ರಾತೀಬ್ ಮಜ್ಲಿಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಇಂತಹಾ ಆಧ್ಯಾತ್ಮಿಕ ಮಜ್ಲಿಸ್ ಗಳು ನಮ್ಮ ಪಾಪ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಹೇಳಿದರು.
ಅವರು ಅರಾದ್ ಜಾಮಿಯಾ ಮಸೀದಿಯ ಮಜ್ಲಿಸಿನಲ್ಲಿ ನಡೆದ ಬೃಹತ್ ರಿಫಾಈ ದಫ್ ರಾತೀಬ್ ಮಜ್ಲಿಸಿನಲ್ಲಿ ಮುನ್ನುಡಿ ಮಾತುಗಳನ್ನಾಡಿದರು.

ಈ ರೀತಿಯ ಆಧ್ಯಾತ್ಮಿಕ ಮಜ್ಲಿಸ್ ಗಳನ್ನು ಗಲ್ಫ್ ರಾಷ್ಟ್ರಗಳಲ್ಲಿ ನಡೆಸಲು ಅನಿವಾಸಿ ಕನ್ನಡಿಗರ ಮಹತ್ತರವಾದ ಸಂಘಟನೆ ಕೆ.ಸಿ.ಎಫ್ ಕಾರಣವಾಗಿದೆ. ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ತನಗೆ ತರಬೇತಿ ನೀಡಿದ ಸಂಪ್ಯ ರಿಫಾಈ ದಫ್ ಸಮಿತಿಯ ಉಸ್ತಾದ್ ಇಬ್ರಾಹಿಂ ಹಾಜಿ ಇಡಬೆಟ್ಟು ಅವರನ್ನು ನೆನಪಿಸಿಕೊಂಡರು.

ಟಿ.ಎಂ. ಉಸ್ತಾದ್ ಹಾಗೂ ಸಿದ್ದೀಕ್ ಉಸ್ತಾದ್ ರವರ ನೇತೃತ್ವದಲ್ಲಿ ರಿಫಾಈ ರಾತೀಬ್ ಮಜ್ಲಿಸ್ ನಡೆಯಿತು. ಹಾರಿಸ್ ಸಂಪ್ಯ ಹಾಗೂ ಅಶ್ರಫ್ ರೆಂಜಾಡಿಯವರು ದಫ್ ರಾತೀಬ್ ಮಜ್ಲಿಸಿಗೆ ನೇತೃತ್ವ ನೀಡಿದರು. ಕೆಸಿಎಫ್ ಬಹರೈನ್ ರಿಫಾಈ ದಫ್ ಸಮಿತಿಯ ವತಿಯಿಂದ ತರಬೇತಿ ನೀಡಿದ ಹಾರಿಸ್ ಸಂಪ್ಯರವರನ್ನು ದಫ್ ತಂಡದವರೆಲ್ಲರೂ ಸೇರಿ ಶಾಲು ಹೊದಿಸಿ ಸನ್ಮಾನಿಸಿದರು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಸಖಾಫಿ ಪಟ್ಟೋರಿ, ಇಸ್ಮಾಯಿಲ್ ಸಅದಿ ಬೇಂಗಿಲ, ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಹನೀಫ್ ಮುಸ್ಲಿಯಾರ್ ತಂಬುದಡ್ಕ ಕೆಸಿಎಫ್ ಕ್ಯಾಬಿನೆಟ್ ನಾಯಕರಾದ ಖಲಂದರ್ ಉಸ್ತಾದ್, ಸೂಫಿ ಪೈಂಬಚ್ಚಾಲ್,
ತೌಫೀಖ್ ಬೆಳ್ತಂಗಡಿ, ಸವಾದ್ ಉಳ್ಳಾಲ, ಮಜೀದ್ ಮಾದಾಪುರ ಹಾಗೂ ಕೆಸಿಎಫ್ ಸ್ಥಾಪಕ ನಾಯಕರಾದ ಫಕ್ರುದ್ದೀನ್ ಹಾಜಿ ಪೈಂಬಚ್ಚಾಲ್, ಉಸ್ಮಾನ್ ಸಂಪ್ಯ, ಇಕ್ಬಾಲ್ ಮಂಜನಾಡಿ ಮುಂತಾದವರು ಉಪಸ್ಥಿತರಿದ್ದರು.

ಕೆಸಿಎಫ್ ಕ್ಯಾಬಿನೆಟ್, ರಾಷ್ಟ್ರೀಯ ಸಮಿತಿ ಮುಖಂಡರು, ಝೋನ್, ಸೆಕ್ಟರ್ ಗಳ ನಾಯಕರು ಹಾಗೂ ಕೇರಳದ ಐಸಿಎಫ್, ಆರ್ ಎಸ್ ಸಿ ಕಾರ್ಯಕರ್ತರು ಸೇರಿದಂತೆ ನೂರಾರು ಸಭಿಕರು ಸೇರಿ ಕಾರ್ಯಕ್ರಮಕ್ಕೆ ಮನಮೆಚ್ಚಿ ಅಭಿನಂದನೆ ಸಲ್ಲಿಸಿದರು.

✒️ಎಂ.ಎ. ವೇಣೂರು, ಬಹರೈನ್.

error: Content is protected !! Not allowed copy content from janadhvani.com