ತಾಜುಲ್ ಉಲಮಾ ನಾಲೆಡ್ಜ್ ಪಾರ್ಕ್ ಎಟ್ಟಿಕುಳಂ ಕೇರಳ ಇದರ ಪ್ರಚಾರಾರ್ಥವಾಗಿ ಸೌದಿ ಪರ್ಯಟನೆಯಲ್ಲಿರುವ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರನ್ನು ಡಿಸೆಂಬರ್ 14 ಗುರುವಾರ ರಾತ್ರಿ ಬುರೈದ ಶಾಲಿಯಾತ್ ಜಂರ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ನೇತಾರರಾದ ಹಾಜಿ ಅಬೂಬಕ್ಕರ್ ರೈಸ್ಕೊ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಕೆಸಿಎಫ್ ಸೌದಿ ಕ್ಯಾಬಿನೆಟ್ ನೇತಾರರಾದ ಯಾಕೂಬ್ ಸಖಾಫಿ, ಅಬ್ದುಲ್ ಖಾದರ್ ಕಣ್ಣಂಗಾರ್, ಬುರೈದ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ, ಕಾರ್ಯದರ್ಶಿ ಬಶೀರ್ ಬನ್ನೂರು ಸಹಿತ ಕೆಸಿಎಫ್ / ಐಸಿಎಫ್, RSC ಸಂಘ ಕುಟುಂಬದ ನೂರಾರು ಜನರು ಬಾಗವಹಿಸಿದರು
ಇಹ ಪರ ವಿಜಯಕ್ಕೆ ಬೇಕಾದ ಸಾರೋಪದೇಶ ನೀಡಿ ಕೂರತ್ ತಂಙಳ್ ಪ್ರಾರ್ಥನೆ ನಡೆಸಿದರು. ಕೂರತ್ ತಂಙಲ್ ರವರ ಸುಪುತ್ರ ಸೈಯದ್ ಅಬ್ದುಲ್ ರಹಿಮಾನ್ ಅಲ್ ಮಶ್ಹೂರ್ ತಂಙಲ್ ರವರು ಉಪಸ್ಥಿತರಿದ್ದರು.