janadhvani

Kannada Online News Paper

ಬೋಳಂತೂರು: ತಾಜುಲ್ ಉಲಮಾ ಅನುಸ್ಮರಣಾ ಸಮ್ಮೇಳನ- ಸ್ವಾಗತ ಸಮಿತಿ ರಚನೆ

ವಿಟ್ಲ : ಬೋಳಂತೂರು ತಾಜುಲ್ ಉಲಮಾ ಸುನ್ನೀ ಸೆಂಟರ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುವ ವಾರ್ಷಿಕೋತ್ಸವ ಮತ್ತು ತಾಜುಲ್ ಉಲಮಾ ಅನುಸ್ಮರಣಾ ಸಮ್ಮೇಳನದ ಸ್ವಾಗತ ಸಮಿತಿಯನ್ನು ದಿನಾಂಕ: 12/12/23 ರ ಮಂಗಳವಾರದಂದು ತಾಜುಲ್ ಉಲಮಾ ಸುನ್ನಿ ಸೆಂಟರ್ ಇದರ ಅಧ್ಯಕ್ಷರಾದ ರಫೀಕ್ ಮಾಡದ ಬಳಿ ಇವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಎನ್,ಸಿ ರೋಡಲ್ಲಿ ರಚಿಸಲಾಯಿತು.

ಚಯರ್ಮೇನ್ ಆಗಿ ಇಬ್ರಾಹಿಂ ಬಿ.ಜಿ,ವೈಸ್ ಚಯರ್ಮೇನ್ ಆಗಿ ಅಬ್ದುಲ್ಲಾ ನಾರಂಕೋಡಿ, ಅದ್ರಾಮಕಾ ಅಶ್ಆರಿಯ ಕನ್ವಿನರಾಗಿ ಬಿ ಕೆ ಹಮೀದ್ ಹಿದಾಯತ್, ವರ್ಕಿಂಗ್ ಕಣ್ವೀನರಾಗಿ ಶರೀಫ್ ಕ್ವಾರ್ಟರ್ಸ್ ಸಲಹಾ ಸಮೀತಿಯ ಸದಸ್ಯರಾಗಿ ಯಾಕುಬ್ ದಂಡೆಮಾರ್,ಅಶ್ರಪ್ ಸೆಡ್,ಅಶ್ರಪ್ ಮುಸ್ಲಿಯಾರ್,ರಫೀಕ್ ಮಾಡದಬಲಿ,ಹಮೀದ್ ಉಸ್ತಾದ್ ಅಂಗಡಿ ಮತ್ತು ಕೋಶಾಧಿಕಾರಿಯಾಗಿ ಶರೀಪ್ ಕೆ ಯನ್ ಪ್ರಚಾರ ಸಮಿತಿಯ ಕನ್ವೀನರಾಗಿ ಫಾರೂಕ್ ಬಿ ಜಿ ಹಾಗೂ ಕೋಆರ್ಡಿನೇಟರ್ ಆಗಿ ಇಬ್ರಾಹಿಂ ತೋಟಲ್ ವರನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕುಬ್ ದಂಡೆಮಾರ್,ಪಂಚಾಯತ್ ಸದಸ್ಯರಾದ ಅಶ್ರಫ್ ಸೆಡ್,ಅನ್ಸಾರ್ ಬಿ.ಜಿ ಹಾಗೂ ತಾಜುಲ್ ಉಲಮಾ ಸುನ್ನಿ ಸೆಂಟರ್ ಎನ್ ಸಿ ರೋಡ್ ಇದರ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮಲ್ಲಿ ರಫೀಕ್ ಮಾಡದಬಳಿ ಸ್ವಾಗತಿಸಿ,ಬಿ ಕೆ ಹಮೀದ್ ಹಿದಾಯತ್ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com