janadhvani

Kannada Online News Paper

ಸೌದಿ: ಮುಂದಿನ ಜನವರಿಯಿಂದ ಬಾಡಿಗೆ ವಹಿವಾಟುಗಳು EJAR ಪ್ಲಾಟ್‌ಫಾರ್ಮ್ ಮೂಲಕ ಮಾತ್ರ

ಇಜಾರ್ ಪ್ಲಾಟ್‌ಫಾರ್ಮ್‌ನ ಹೊರಗೆ ಬಾಡಿಗೆ ವಹಿವಾಟು ನಡೆಸುವುದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.ಅಂತಹವರ ವಿರುದ್ಧ ದಂಡ ಸೇರಿದಂತೆ ಕಠಿಣ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು.

ರಿಯಾದ್: ಮುಂದಿನ ಜನವರಿಯಿಂದ ಬಾಡಿಗೆ ವಹಿವಾಟುಗಳನ್ನು EJAR ಪ್ಲಾಟ್‌ಫಾರ್ಮ್ ಮೂಲಕ ಮಾತ್ರವಾಗಿ ನಿಯಂತ್ರಿಸಲಾಗುವುದು ಎಂದು ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರ ಹೇಳಿದೆ. ಇದು ಮಧ್ಯವರ್ತಿಗಳನ್ನು ತೊಡೆದುಹಾಕುವ ಮೂಲಕ ಹಣಕಾಸಿನ ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿದೆ.

ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರದ ವಕ್ತಾರ ತೈಸೀರ್ ಅಲ್ ಮುಫರಜ್ ಮಾತನಾಡಿ, ಜನವರಿ 2024 ರಿಂದ ಇಜಾರ್ ಪ್ಲಾಟ್‌ಫಾರ್ಮ್ ಮೂಲಕ ಮಾತ್ರ ಬಾಡಿಗೆಯನ್ನು ನಿಯಂತ್ರಿಸಲಾಗುತ್ತದೆ. ಆದಾಗ್ಯೂ, ಆದೇಶದ ದಿನಾಂಕ ಮತ್ತು ವಿವರಗಳನ್ನು ಅಧಿಕೃತ ಚಾನೆಲ್‌ಗಳ ಮೂಲಕ ಪ್ರಕಟಿಸಲಾಗುವುದು ಎಂದು EJAR ವೇದಿಕೆ ಸ್ಪಷ್ಟಪಡಿಸಿದೆ.

EJAR ಪ್ಲಾಟ್‌ಫಾರ್ಮ್‌ನ ಹೊರಗೆ ಯಾವುದೇ ಬಾಡಿಗೆ ವಹಿವಾಟುಗಳನ್ನು ಅನುಮತಿಸಲಾಗುವುದಿಲ್ಲ. ಹೊಸ ಕ್ರಮವು ಮಧ್ಯವರ್ತಿಗಳ ಪರಸ್ಪರ ಕ್ರಿಯೆಯನ್ನು ನಿಯಂತ್ರಿಸುವ ಮತ್ತು ಹಣಕಾಸಿನ ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಜಾರ್ ಪ್ಲಾಟ್‌ಫಾರ್ಮ್‌ನ ಹೊರಗೆ ಬಾಡಿಗೆ ವಹಿವಾಟು ನಡೆಸುವುದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.ಅಂತಹವರ ವಿರುದ್ಧ ದಂಡ ಸೇರಿದಂತೆ ಕಠಿಣ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು.

ಇಜಾರ್ ವೇದಿಕೆಯಲ್ಲಿ ಇದುವರೆಗೆ ಸುಮಾರು 80 ಲಕ್ಷ ಬಾಡಿಗೆ ಒಪ್ಪಂದಗಳು ದಾಖಲಾಗಿವೆ. ಇವುಗಳಲ್ಲಿ ಅರವತ್ತಾರು ಲಕ್ಷ ಒಪ್ಪಂದಗಳು ವಸತಿ ಘಟಕಗಳಿಗೆ ಮತ್ತು ಹದಿಮೂರು ಲಕ್ಷ ಒಪ್ಪಂದಗಳು ವಾಣಿಜ್ಯ ಘಟಕಗಳಿಗೆ ಸಂಬಂಧಿಸಿದ್ದಾಗಿದೆ . ಈ ವರ್ಷ EJAR ನಲ್ಲಿ ದಿನಕ್ಕೆ ಸುಮಾರು 18,000 ಕರಾರುಗಳಂತೆ ನೋಂದಣಿಯಾಗಿವೆ ಎಂದು ರಿಯಲ್ ಎಸ್ಟೇಟ್ ಅಥಾರಿಟಿ ಹೇಳಿದೆ.

error: Content is protected !! Not allowed copy content from janadhvani.com