janadhvani

Kannada Online News Paper

ಇಸ್ರೇಲ್‌ ಬೆಂಬಲ ಹಿನ್ನಡೆ- ಸ್ಟಾರ್‌ಬಕ್ಸ್ ಗೆ ಎರಡು ವಾರದಲ್ಲಿ 12 ಶತಕೋಟಿ ಡಾಲರ್ ನಷ್ಟ

ಗಾಝಾ ಸಂಘರ್ಷದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವ ಸ್ಟಾರ್‌ಬಕ್ಸ್‌ನ ನಿಲುವನ್ನು ಪ್ರತಿಭಟಿಸಿ ವಿಶ್ವಾದ್ಯಂತ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು.

ನ್ಯೂಯಾರ್ಕ್ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವನ್ನು ಬಹಿರಂಗವಾಗಿ ಬೆಂಬಲಿಸಿದ್ದ ಅಮೆರಿಕದ ಬಹುರಾಷ್ಟ್ರೀಯ ಏಕಸ್ವಾಮ್ಯ ಕಂಪನಿ ಸ್ಟಾರ್ ಬಕ್ಸ್ ಕಾರ್ಪೊರೇಷನ್ ಭಾರಿ ಹಿನ್ನಡೆ ಅನುಭವಿಸಿದೆ. ವರದಿಯ ಪ್ರಕಾರ, ಕಾಫಿ ದೈತ್ಯನ ಮಾರುಕಟ್ಟೆ ಮೌಲ್ಯವು ಎರಡು ವಾರಗಳಲ್ಲಿ 12 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಕಳೆದುಕೊಂಡಿದೆ.

ಜಾಗತಿಕ ಬಹಿಷ್ಕಾರದಿಂದಾಗಿ ಸ್ಟಾರ್‌ಬಕ್ಸ್ ಕಂಪನಿಯ ಒಟ್ಟು ಮೌಲ್ಯದ 9.4 ಪ್ರತಿಶತವನ್ನು ಕಳೆದುಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಗಾಝಾ ಸಂಘರ್ಷದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವ ಸ್ಟಾರ್‌ಬಕ್ಸ್‌ನ ನಿಲುವನ್ನು ಪ್ರತಿಭಟಿಸಿ ವಿಶ್ವಾದ್ಯಂತ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ಸತತ 12 ದಿನಗಳ ಕಾಲ ಸ್ಟಾರ್‌ಬಕ್ಸ್ ಷೇರುಗಳು ತೀವ್ರವಾಗಿ ಕುಸಿದಿವೆ. 1992ರ ನಂತರ ಕಂಪನಿಗೆ ಇದು ಅತಿ ದೊಡ್ಡ ಆರ್ಥಿಕ ಹಿನ್ನಡೆಯಾಗಿದೆ. ಎರಡು ವಾರಗಳ ಹಿಂದೆ $114 ಇದ್ದ ಸ್ಟಾರ್‌ಬಕ್ಸ್ ಷೇರುಗಳು ಈಗ $95 ನಲ್ಲಿ ವಹಿವಾಟಾಗುತ್ತಿವೆ.

USA ವಾಷಿಂಗ್ಟನ್ ಸಿಯಾಟಲ್ ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಾಫಿ ಹೌಸ್ ರೋಸ್ಟರಿ ಮೀಸಲು ಸರಣಿಯಾಗಿದೆ ಸ್ಟಾರ್‌ಬಕ್ಸ್ ಕಾರ್ಪೊರೇಷನ್. ಇದು ವಿಶ್ವದ ಅತಿದೊಡ್ಡ ಕಾಫಿ ಹೌಸ್ ಸರಣಿ ಎಂದು ಕರೆಯಲ್ಪಡುತ್ತದೆ.

1971 ರಲ್ಲಿ ಸ್ಥಾಪನೆಯಾದ ಕಂಪನಿಯು 84 ದೇಶಗಳಲ್ಲಿ 35,000 ಕ್ಕೂ ಹೆಚ್ಚು ಶಾಪ್ ಗಳನ್ನು ಹೊಂದಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇಸ್ರೇಲ್ ಅನ್ನು ಬಹಿರಂಗವಾಗಿ ಬೆಂಬಲಿಸಿದ ನಂತರ, ಪಶ್ಚಿಮ ಏಷ್ಯಾದಲ್ಲಿ ಭಾರಿ ಹಿನ್ನಡೆಯಾಗಿದೆ.

ಗ್ರಾಹಕರ ಕೊರತೆಯಿಂದಾಗಿ ಕಂಪನಿಯು ಈಜಿಪ್ಟ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಏತನ್ಮಧ್ಯೆ, ಸ್ಟಾರ್‌ಬಕ್ಸ್ ವರ್ಕರ್ಸ್ ಯುನೈಟೆಡ್ ಎಂಬ ಕಂಪನಿಯ ಕಾರ್ಮಿಕ ಸಂಘಟನೆಯು ಪ್ಯಾಲೆಸ್ಟೈನ್‌ನೊಂದಿಗೆ ಐಕಮತ್ಯವನ್ನು ಘೋಷಿಸಲು ಮುಂದಾಯಿತು. ಕಡಿಮೆ ವೇತನ ನೀಡುತ್ತಿದ್ದಾರೆ ಎಂದು ಆರೋಪಿಸಿ USನ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ನೌಕರರು ಮುಷ್ಕರ ನಡೆಸುತ್ತಿರುವುದು ಕೂಡ ಸ್ಟಾರ್‌ಬಕ್ಸ್‌ಗೆ ಹಿನ್ನಡೆಯಾಗಿದೆ ಎಂದು ಪರಿಗಣಿಸಲಾಗಿದೆ.

error: Content is protected !! Not allowed copy content from janadhvani.com