ಟೆಹರಾನ್: ಇನ್ನು ಮುಂದೆ ಇರಾನ್ ಗೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಅವಶ್ಯಕತೆ ಇಲ್ಲ. ಭಾರತ ಸೇರಿದಂತೆ 33 ರಾಷ್ಟ್ರಗಳಿಗೆ ವೀಸಾ ಕಡ್ಡಾಯ ನೀತಿಯನ್ನು ಇರಾನ್ ಸರ್ಕಾರ ಮನ್ನಾ ಮಾಡಿದೆ.
ಈ ಬಗ್ಗೆ ಸ್ವತಃ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಇಝ್ಝತುಲ್ಲಾಹ್ ಝರ್ಗಾಮಿ ಅವರು ಭಾರತದಿಂದ ಭೇಟಿ ನೀಡುವವರಿಗೆ ವೀಸಾ ಅವಶ್ಯಕತೆಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಇರಾನ್ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಭಾರತವೂ ಸೇರಿದಂತೆ 33 ದೇಶಗಳಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಲು ಇರಾನ್ ಸರ್ಕಾರ ಬುಧವಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಝರ್ಗಾಮಿ, ಪ್ರವಾಸೋದ್ಯಮ ಆಗಮನವನ್ನು ಹೆಚ್ಚಿಸುವ ಮತ್ತು ವಿಶ್ವದಾದ್ಯಂತದ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಲಾಗಿದ್ದು, ಇದೇ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ಇರಾನೋಫೋಬಿಯಾ ಅಭಿಯಾನಗಳನ್ನು ತಟಸ್ಥಗೊಳಿಸಬಹುದು ಎಂದು ಅವರು ಹೇಳಿದರು.
ಇರಾನ್‌ನ ಹೊಸ ವೀಸಾ-ಮನ್ನಾ ಕಾರ್ಯಕ್ರಮಕ್ಕೆ ಅನುಮೋದಿಸಿದ 33 ದೇಶಗಳ ಪಟ್ಟಿ ಇಂತಿದೆ:
ಭಾರತ, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಲೆಬನಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಟುನೀಶಿಯಾ, ಮಾರಿಟಾನಿಯಾ, ತಾಂಜೇನಿಯಾ, ಜಿಂಬಾಬ್ವೆ, ಮಾರಿಷಸ್, ಸೀಶೆಲ್ಸ್, ಇಂಡೋನೇಷ್ಯಾ, ದರುಸ್ಸಲಾಮ್, ಜಪಾನ್, ಸಿಂಗಾಪುರ, ಕಾಂಬೋಡಿಯಾ, ಮಲೇಷ್ಯಾ , ಬ್ರೆಜಿಲ್, ಪೆರು, ಕ್ಯೂಬಾ, ಮೆಕ್ಸಿಕೋ, ವೆನೆಜುವೆಲಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಸೆರ್ಬಿಯಾ, ಕ್ರೊಯೇಷಿಯಾ ಮತ್ತು ಬೆಲಾರಸ್.
ಇತ್ತೀಚೆಗೆ ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಭಾರತದಿಂದ ಬರುವ ಸಂದರ್ಶಕರಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಿತ್ತು.
















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ