janadhvani

Kannada Online News Paper

ಕತಾರ್‌ನಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತ್ಯು

ಶುಕ್ರವಾರ ಮಧ್ಯಾಹ್ನ ಖತರಿನ ತುಮಾಮಾದ ಮನೆಯೊಂದರ ಮುಂದೆ ಈ ಘಟನೆ ನಡೆದಿದೆ.

ದೋಹಾ: ಕತಾರ್‌ನಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ಮೂರು ವರ್ಷದ ಮಗುವೊಂದು ಮೃತಪಟ್ಟಿದೆ. ಶಾಲೆಗೆ ಹೊರಟಿದ್ದ ಸಹೋದರಿಯೊಂದಿಗೆ ಬಸ್ ಬಳಿ ಬಂದಾಗ ಅಪಘಾತ ಸಂಭವಿಸಿದೆ.ಕೇರಳದ ತ್ರಿಶೂರ್ ಮತಿಲಕಂ ಪಝುಂತರ ಉಳಕ್ಕಲ್ ಹೌಸ್‌ನಲ್ಲಿ ರಿಯಾದ್ ಮುಹಮ್ಮದ್ ಅಲಿ ಮತ್ತು ಝುಹೈರಾ ದಂಪತಿಯ ಗಂಡು ಮಗು ರೈಶ್ ಮೃತಪಟ್ಟಿದೆ.

ಶುಕ್ರವಾರ ಮಧ್ಯಾಹ್ನ ಖತರಿನ ತುಮಾಮಾದ ಮನೆಯೊಂದರ ಮುಂದೆ ಈ ಘಟನೆ ನಡೆದಿದೆ. ಶಾಲಾ ಬಸ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.ಆಲಿವ್ ಇಂಟರ್ ನ್ಯಾಷನಲ್ ಶಾಲೆಯ ಕೆ.ಜಿ.ವಿದ್ಯಾರ್ಥಿನಿ ಸಹೋದರಿ ಸಯಾ, ಕಾನೂನು ಪ್ರಕ್ರಿಯೆಗಳು ಪೂರ್ತಿಗೊಳಿಸಿ, ಖತರಿನ ಅಬೂ ಹಮೀರಿನ ಖಬರ್ ಸ್ಥಾನದಲ್ಲಿ ಮಗುವಿನ ಜನಾಝವನ್ನು ದಫನ ಮಾಡಲಾಯಿತು.