ದುಬೈ: ವಿದೇಶಿ ಕನ್ನಡಿಗರ ಅತೀ ದೊಡ್ಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ತನ್ನ ಎರಡನೇ ಆವೃತ್ತಿಯ ಮಹಬ್ಬ ಫ್ಯಾಮಿಲಿ ಫೆಸ್ಟ್ ಪೋಸ್ಟರ್ ದುಬೈ ಮರ್ಕಝಿನಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ A P ಉಸ್ತಾದರ ಪುಣ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಜನಾಬ್ ಯು. ಟಿ ಅಬ್ದುಲ್ ಖಾದರ್ ಫರೀದ್ (ಸಭಾಧ್ಯಕ್ಷರು – ಕರ್ನಾಟಕ ವಿಧಾನಸಭೆ), ಜನಾಬ್ ಯು. ಟಿ ಇಫ್ತಿಕರ್ ಫರೀದ್, ಬನ್ಯಾಸ್ ಸ್ಪೈಕ್ ಹಾಜಿ ಅಬ್ದುಲ್ ರಹ್ಮಾನ್ ಹಾಗು ಬಹು ಅಬ್ದುಲ್ ಜಲೀಲ್ ನಿಝಮಿ – ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷರು, ಝೈನುದ್ದೀನ್ ಹಾಜಿ ಉಪಾಧ್ಯಕ್ಷರು ಯುಎಇ ರಾಷ್ಟ್ರೀಯ ಸಮಿತಿ, ಮೂಸ ಹಾಜಿ ಬಸರ ಪ್ರಧಾನ ಕಾರ್ಯದರ್ಶಿ ಯುಎಇ ರಾಷ್ಟ್ರೀಯ ಸಮಿತಿ, ಶಾಹುಲ್ ಹಮೀದ್ ಸಖಾಫಿ – ಅಧ್ಯಕ್ಷರು ಯುಎಇ ಶಿಕ್ಷಣ ವಿಭಾಗ, ಶುಕೂರ್ ಹಾಜಿ ಉಳ್ಳಾಲ ಹಾಗು ಯುಎಇ ರಾಷ್ಟ್ರೀಯ ಸಮಿತಿ ನಾಯಕರು ಹಾಗು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಸಡಗರದಲ್ಲಿ ಯುಎಇಯಾದ್ಯಂತ ಇರುವ ಎಲ್ಲಾ ಕನ್ನಡಿಗರು ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಹಾಗು ಇದರ ಯಶಸ್ವಿಗೆ ಎಲ್ಲಾ ಕಾರ್ಯಕರ್ತರು ಪ್ರಯತ್ನಿಸಬೇಕಾಗಿ ವಿನಂತಿಸಲಾಯಿತು.