ಮಂಗಳೂರು : ಸರಕಾರದ ಸವಲತ್ತುಗಳು ಜನರಿಗೆ ತಲುಪುಂತಾಗಬೇಕು ಆ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯಚರಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮರ್ಕಝ್ ನಾಲೆಡ್ಜ್ ಸಿಟಿ ಮುಖ್ಯಸ್ಥರಾದ ಡಾ. ಅಬ್ದುಲ್ ಹಕೀಮ್ ಅಝ್ಹರಿ ಹೇಳಿದರು.
ಅವರು ದಿನಾಂಕ 06.12.2023 ರಂದು ಸಾಗರ್ ಅಡೊಟೋರಿಯಂ ಪಾಣೆಮಂಗಳೂರಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಏರ್ಪಡಿಸಿದ ಫ್ಲೋರಿಶ್ ಲೀಡರ್ಸ್ ವರ್ಕ್‌ಶಾಪ್ ಕಾರ್ಯಕ್ರಮದಲ್ಲಿ ಮುಖ್ಯ ತರಗತಿಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾಧ್ಯಕ್ಷರಾದ ಹಾಜಿ ಬಿ. ಎಂ. ಮಮ್ತಾಝ್ ಆಲಿ ವಹಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂ ಸುಫ್‌ಯಾನ್ ಮದನಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಜಿ. ಎಂ. ಎಂ. ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಅಶ್ರಫ್ ಸಅದಿ ಮಲ್ಲೂರು, ವೆಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಕೋಶಾಧಿಕಾರಿ ಎಸ್. ಕೆ. ಅಬ್ದುಲ್ ಖಾದರ್ ಹಾಜಿ, ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಉಮರಾ ನಾಯಕರಾದ ಶಾಕಿರ್ ಹಾಜಿ ಹೈಸಮ್ ಹಾಗೂ ಮತ್ತಿತರು ಉಪಸ್ಥಿತರಿದ್ದರು. ವೆಸ್ಟ್ ಜಿಲ್ಲಾ ವ್ಯಾಪ್ತಿಯ ಯುನಿಟ್, ಸರ್ಕಲ್ ಝೋನ್ ಹಾಗೂ ಜಿಲ್ಲಾ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್ ಸಅದಿ ಖತರ್ ರವರು ಸ್ವಾಗತಿಸಿ ಕಾರ್ಯದರ್ಶಿ ಉಮರ್ ಮಾಸ್ಟರ್ ಧನ್ಯವಾದಗೈದರು.
ವರದಿ :ರಹೀಮ್ ಸಅದಿ ಖತರ್