ಮುಂಬೈ | ಮುಂಬೈ ನಗರವನ್ನು ಜನಸಾಗರವಾಗಿಸಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಎಸ್ ಎಸ್ ಎಫ್ ರಾಷ್ಟ್ರೀಯ ಕಾನ್ಫರೆನ್ಸ್ ಇವತ್ತು ಸಂಜೆ ಅಂತಾರಾಷ್ಟ್ರೀಯ ಸಮ್ಮೇಳನದೊಂದಿಗೆ ಸಮಾಪ್ತಿಯಾಗಲಿದೆ.
ಮುಂಬೈ ಹಾದಿ ಬೀದಿಗಳು ಈಗಾಗಲೇ ಜನನಿಭಿಢವಾಗಿ ಎಸ್ ಎಸ್ ಎಫ್ ಸಮ್ಮೇಳನ ನಗರಕ್ಕೆ ಜನರು ಹರಿದು ಬರುತ್ತಿದ್ದು, ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ನಾಯಕತ್ವದಲ್ಲಿ ,ಯುಎಇ ,ಮಲೇಷ್ಯಾ, ಬಗ್ದಾದ್ ಸಹಿತ ಹಲವು ರಾಷ್ಟ್ರದ ನಾಯಕರು ,ದೇಶದ 28ರಾಜ್ಯಗಳ ಶಾಫಿ ,ಹನಫಿ ಉಲಮಾ ನಾಯಕರು, ಎಸ್ ಎಸ್ ಎಫ್ ಕಾರ್ಯಕರ್ತರು ಸಂಗಮಿಸುವ ಐತಿಹಾಸಿಕ ಸಂಗಮ ಚರಿತ್ರೆಯ ಪುಟದಲ್ಲಿ ಹೊಸ ಅಧ್ಯಾಯವನ್ನು ನಿರ್ಮಿಸಲಿದೆ.
ಸಂಜೆ ಆರಂಭಿಸಿದ ಸಮಾರೋಪ ಸಮಾರಂಭವನ್ನು ಅಫೀಫುದ್ದೀನ್ ಜೀಲಾನಿ ಬಾಗ್ದಾದ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಲಿ ಬಾಫಕಿ ಅವರ ಪ್ರಾರ್ಥನೆಯೊಂದಿಗೆ ಉದ್ಘಾಟನೆ ಗೊಂಡ ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ವಹಿಸಲಿದ್ದಾರೆ.
ಸಯ್ಯಿದ್ ಮುಯಿನ್ ಮಿಯಾ ಜಿಲಾನಿ, ಅಲ್ಲಾಮಾ ಹುಸೈನ್ ಶಾ ಜಿಲಾನಿ, ಮಹಿ ಮಿಯಾ ಸಾಹಿಬ್, ಮನ್ನಾನ್ ಮಿಯಾ ಸಾಹಿಬ್, ಮುಪ್ತಿ ಬದ್ರೇ ಆಲಂ, ಸಯ್ಯಿದ್ ಫಝಲ್ ಕೋಯಮ್ಮ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಯ್ಯಿದ್ ಅಬ್ದುರಹ್ಮಾನ್ ಬಾಖವಿ ಅಲ್ ಅಹ್ಸನಿ, ಸಯ್ಯಿದ್ ಮುಹಮ್ಮದ್ ಅಶ್ರಫ್ ಅಶ್ರಫಿ, ಮುಪ್ತಿ ಮಹಮ್ಮದ್, ಮುಪ್ತಿ ಯಹ್ಯಾ ರಝಾ, ಮುಪ್ತಿ ಮುಜ್ಜಬಾ ಶರೀಫ್, ಡಾ. ಅಬ್ದುಲ್ ಹಕೀಂ ಅಝ್ಹರಿ, ಡಾ. ಮುಹಮ್ಮದ್ ಫಾರೂಕ್ ನಈಮಿ, ನೌಶಾದ್ ಆಲಂ ಮಿಸ್ಸಾಹಿ, ಇಬ್ರಾಹಿಂ ಮದನಿ ಮತ್ತು ಸಯೀದ್ ನೂರಿ ಸಾಹಿಬ್ ಭಾಗಿಯಾಗಲಿದ್ದಾರೆ. ಸಮಾರೋಪ ಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಹತ್ತು ಲಕ್ಷ ಜನರು ಭಾಗವಹಿಸಲಿದ್ದಾರೆ.