janadhvani

Kannada Online News Paper

ಯುವ ವಿದ್ವಾಂಸ, ಐಸಿಎಫ್ ಕಾರ್ಯಕರ್ತ ಅಬ್ದುಲ್ ಅಝೀಝ್ ಸಖಾಫಿ ಜಿದ್ದಾದಲ್ಲಿ ನಿಧನ

ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ಸೌದಿ ತೊರೆದಿದ್ದರು. ಇದೀಗ ಕೆಲವು ವಾರಗಳ ಹಿಂದೆ ಹೊಸ ವೀಸಾದೊಂದಿಗೆ ಮತ್ತೆ ಸೌದಿಗೆ ಮರಳಿದ್ದರು.

ರಿಯಾದ್: ಯುವ ಮಲಯಾಳಿ ಧಾರ್ಮಿಕ ಪಂಡಿತರೊಬ್ಬರು ಜಿದ್ದಾದಲ್ಲಿ ನಿಧನರಾಗಿದ್ದಾರೆ. ಗೂಡಲ್ಲೂರು ಪಾಕನಾಳ ಮೂಲದ ಅಬ್ದುಲ್ ಅಝೀಝ್ ಸಖಾಫಿ (41) ಇಂದು ಜಿದ್ದಾದಲ್ಲಿ ನಿಧನರಾದರು. ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಳಗ್ಗೆ ಮೃತಪಟ್ಟಿದ್ದಾರೆ.

ಅವರು ಇಂಡಿಯನ್ ಕಲ್ಚರಲ್ ಫೌಂಡೇಶನ್ (ICF) ಕಾರ್ಯಕರ್ತರಾಗಿದ್ದು, ಸಾರ್ವಜನಿಕ ಕಾರ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಮತ್ತು ಐಸಿಎಫ್ ಮುಶ್ರಿಫಾ ಘಟಕದ ಅಧ್ಯಕ್ಷರಾಗಿ ಮತ್ತು ಜಿದ್ದಾ ಇಮಾಮ್ ರಾಝಿ ಮದ್ರಸಾ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಅವರು ಈ ಹಿಂದೆ ಸೌದಿ ಅರೇಬಿಯಾದಲ್ಲಿದ್ದು, ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ಸೌದಿ ತೊರೆದಿದ್ದರು. ಇದೀಗ ಕೆಲವು ವಾರಗಳ ಹಿಂದೆ ಹೊಸ ವೀಸಾದೊಂದಿಗೆ ಮತ್ತೆ ಸೌದಿಗೆ ಮರಳಿದ್ದರು.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪಾಕಣ ಕುತ್ತುಕಲ್ಲನ್ ಅಬೂಬಕರ್ ಮತ್ತು ನಫೀಸಾ ದಂಪತಿಗಳ ಪುತ್ರ. ಅವರ ಪತ್ನಿ ಕೈತಪೋಯಿಲ್ ಸ್ವದೇಶಿ ಶಾಜಿಮಾ.ಅಮ್ಜದ್ ಅಲಿ, ಫಾತಿಮಾ ಲೈಬಾ ಮತ್ತು ಬಿಶ್ರುಲ್ ಹಾಫಿ ಮಕ್ಕಳು. ಅಬೂಬಕರ್ ಸಿದ್ದೀಕ್ ಐಕರಪಾಡಿ ಮತ್ತು ಅಬ್ದುನ್ನಾಸರ್ ಹಾಜಿ ಮನ್ನಾರ್ಕ್ಕಾಡ್ ನೇತೃತ್ವದಲ್ಲಿ ಜಿದ್ದಾ ಐಸಿಎಫ್ ಕ್ಷೇಮಾಭಿವೃದ್ಧಿ ವಿಭಾಗವು ಮರಣಾನಂತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಅಬ್ದುಲ್ ಅಝೀಝ್ ಸಖಾಫಿ ಅವರ ನಿಧನಕ್ಕೆ ಜಿದ್ದಾ ಐಸಿಎಫ್ ಸಂತಾಪ ಸೂಚಿಸಿದೆ.

error: Content is protected !! Not allowed copy content from janadhvani.com