ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್ ಎಸ್ಸೆಸ್ಸೆಫ್ ಚೆನ್ನಾವರ ಶಾಖಾ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ ಹಾಗೂ ಅಗಲಿದ ಸಂಘ ಕುಟುಂಬದ ಕಾರ್ಯಕರ್ತರ ಹಿತೈಷಿಗಳ ಅನುಸ್ಮರಣಾ ಸಂಗಮವು ಚೆನ್ನಾವರ ಮಸೀದಿಯ ಬಳಿ ಅಬ್ದುಲ್ ಕರೀಮ್ ಹಾಜಿ ರವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ನಾಯಕ ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ ರವರು ಉದ್ಘಾಟಿಸಿ ಮಾತನಾಡಿದರು. ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಪ್ರಭಾಷಣಗಾರರೂ ಮೂಡಬಿದ್ರೆ ದ್ಸಿಕ್ರಾ ಸಂಸ್ಥಾಪಕರು ಆದ ಮೌಲಾನ ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಿದರು.
ಹಾಫಿಳ್ ಮುಹಮ್ಮದ್ ತ್ವಾಹಿರ್ ಕಿರಾಅತ್ ಪಠಿಸಿದರು. ವೇದಿಕೆಯಲ್ಲಿ ಜಾಮಿಯಾ ಸಅದಿಯಾದಿಂದ ಸಅದಿ ಪೂರ್ತಿಕರಿಸಿದ ನಿಝಾರ್ ಸಅದಿ, ಮುಹಿಮ್ಮಾತ್ ನಿಂದ ಹಿಮಮಿ ಪಠಣ ಪೂರ್ತಿಕರಿಸಿದ ಖಾಲಿದ್ ಹಿಮಮಿ ಹಾಗೂ ಎಸ್ಸೆಸ್ಸೆಫ್ ತರ್ತೀಲ್ ಹಿಫ್ಳ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದ ಹಾಫಿಳ್ ಮುಹಮ್ಮದ್ ತ್ವಾಹಿರ್ ರವರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಾಪಳಡ್ಕ ದರ್ಸ್ ವಿದ್ಯಾರ್ಥಿಗಳ ಬುರ್ಧಾ ಆಲಾಪನೆ, ಕೂಟು ಝಿಯಾರತ್ ಧ್ವಜಾರೋಹಣ ಮೊದಲಾದ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿಪಿ ಅಬೂಬಕರ್ ಮದನಿ, ಹಸನ್ ಸಖಾಫಿ ಬೆಳ್ಳಾರೆ, ಎಸ್ ವೈಎಸ್ ಪುತ್ತೂರು ಝೋನ್ ಅಧ್ಯಕ್ಷ ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ, ಕೈಕಾರ ಯೂಸುಫ್ ಹಾಜಿ, ಯೂಸುಫ್ ಗೌಸಿಯಾ ಸಾಜ, ಮಾಡಾವು ಸರ್ಕಲ್ ಎಸ್ ವೈಎಸ್ ಅಧ್ಯಕ್ಷ ಶಾಫಿ ಮದನಿ ಮಾಡಾವು, ಅಬೂಬಕರ್ ಫಾಳಿಲಿ ಬೆಳಂದೂರು, ನಝೀರ್ ದೇವಸ್ಯ, ನಝೀರ್ ಮಾಡಾವು, ಅಬ್ಬಾಸ್ ಎನ್, ಯೂಸುಫ್ ಬಾಯಂಬಾಡಿ, ಎಸ್ ಇ ಅಬ್ದುಲ್ಲ ಸವಣೂರು, ಸಿಪಿ ಮಹಮ್ಮದ್ ಹಾಜಿ, ಅಬ್ದುರ್ರಹ್ಮಾನ್ ಬಿ, ಎಸ್ ವೈಎಸ್ ಅಧ್ಯಕ್ಷ ಮುಹಮ್ಮದ್ ಕುಂಡಡ್ಕ, ಎಸ್ ವೈಎಸ್ ಪುತ್ತೂರು ಝೋನ್ ಸೋಷಿಯಲ್ ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೆಸಿಎಫ್ ಬಹ್ರೈನ್ ಆಲಿಕುಂಞಿ ಹಾಜಿ, ಇಸ್ಮಾಯಿಲ್ ಹನೀಫಿ, ಕೆಸಿಎಫ್ ಅಲ್ ಕೋಬಾರ್ ಅಬ್ದುಲ್ ರಶೀದ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಇಬ್ರಾಹಿಮ್ ರಝ್ವಿ, ಇಬ್ರಾಹಿಮ್ ಮುಲಾರ್, ಎ ಎಸ್ ಇಸ್ಮಾಯಿಲ್ ಸಾಹೆಬ್ ಅಂಕತ್ತಡ್ಕ, ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್ ಕಾರ್ಯದರ್ಶಿ ಶಹೀಮ್ ಅರಿಕ್ಕಿಲ, ಎಸ್ ವೈಎಸ್ ದ.ಕ ಜಿಲ್ಲಾ ಸಂಚಾಲಕ ಶಂಸುದ್ದೀನ್ ಝಮ್ ಝಮ್ ಬೆಳ್ಳಾರೆ, ಪುತ್ತೂರು ಡಿವಿಶನ್ ಖಲಂದರ್ ಪಾಟ್ರಕೋಡಿ, ಕುಂಬ್ರ ಸೆಕ್ಟರ್ ಇರ್ಷಾದ್ ಗಟ್ಟಮನೆ, ಉಮರ್ ಮಿಸ್ಬಾಹಿ,ನಸೀರ್ ನಿಝಾಮಿ, ಶಾಹುಲ್ ಹಮೀದ್ ಕಬಕ, ಇಬ್ರಾಹಿಮ್ ಮದನಿ ಬೆಳ್ಳಾರೆ, ಝೈನುದ್ದೀನ್ ಹಾಜಿ ಬಾಯಂಬಾಡಿ, ಪುತ್ತುಂಞಿ ಹಾಜಿ, ಪುತ್ತು ಹಾಜಿ ಬಿಸ್ಮಿಲ್ಲಾ , ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ಲ ಪಿವಿ, ಯಹ್ಯಾ ಮುಸ್ಲಿಯಾರ್, ಅಬ್ದುಸ್ಸತ್ತಾರ್, ನಾಸಿರ್ ಎಪಿ, ಎಸ್ಸೆಸ್ಸೆಫ್ ಸೆಕ್ಟರ್ ಮುನಾಝ್ ಉಮರ್ ಕೆ ಮೊದಲಾದವರು ಉಪಸ್ಥಿತರಿದ್ದರು.
ಯೂಸುಫ್ ಹಾಜಿ ಸ್ವಾಗತಿಸಿ ನಿಝಾರ್ ಸಅದಿ ವಂದಿಸಿದರು.