janadhvani

Kannada Online News Paper

ಯುಎಇ ರಾಷ್ಟ್ರೀಯ ದಿನಾಚರಣೆ: ಖಾಸಗಿ ವಲಯಗಳಿಗೂ ಮೂರು ದಿನಗಳ ರಜೆ

ಡಿಸೆಂಬರ್ 1 ರಂದು ಹುತಾತ್ಮರ ದಿನವಾಗಿ ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಅಬುಧಾಬಿ: ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಯುಎಇಯಲ್ಲಿ ಖಾಸಗಿ ವಲಯದ ಉದ್ಯೋಗಿಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ಡಿಸೆಂಬರ್ 2 ರಿಂದ 4 ರವರೆಗೆ ರಜೆ ಇರಲಿದೆ.

ಡಿಸೆಂಬರ್ 5 ರಂದು ಸಂಸ್ಥೆಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ. ಡಿಸೆಂಬರ್ 1 ರಂದು ಹುತಾತ್ಮರ ದಿನವಾಗಿ ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಈ ಹಿಂದೆ ಖಾಸಗಿ ವಲಯದ ಉದ್ಯೋಗಿಗಳಿಗೆ ಎರಡು ದಿನ ರಜೆ ಘೋಷಿಸಲಾಗಿತ್ತು. ನಂತರ, ಫೆಡರಲ್ ಸರ್ಕಾರಿ ನೌಕರರಿಗೆ ಮೂರು ದಿನಗಳ ರಜೆಯನ್ನು ನೀಡಲು ನಿರ್ಧರಿಸಲಾಯಿತು.ಇದನ್ನು ಖಾಸಗಿ ವಲಯಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಇಂದು ರಾತ್ರಿ ಪ್ರಕಟಿಸಲಾಗಿದೆ.

error: Content is protected !! Not allowed copy content from janadhvani.com