janadhvani

Kannada Online News Paper

ಮದೀನಾ: ಮಸ್ಜಿದುನ್ನಬವಿಗೆ ವಿಶ್ವಾಸಿಗಳ ಪ್ರವಾಹ- ಆರು ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ವಿಶ್ವಾಸಿಗಳ ಆಗಮನ

ಮಸ್ಜಿದುನ್ನಬವಿ ಅಧಿಕೃತರು ವಿಶ್ವಾಶಿಗಳಿಗೆ ತೊಂದರೆಯಾಗದಂತೆ ಪ್ರಾರ್ಥನೆ ನಿರ್ವಹಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ

ರಿಯಾದ್: ಮದೀನಾದಲ್ಲಿ ಮಸ್ಜಿದುನ್ನಬವಿಗೆ (ಪ್ರವಾದಿ ಮಸೀದಿ) ಆಗಮಿಸುವ ವಿಶ್ವಾಸಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ. ಆರು ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ವಿಶ್ವಾಸಿಗಳು ಮಸ್ಜಿದುನ್ನಬವಿಗೆ ತಲುಪಿದರು. ಶಾಲಾ ರಜೆಗಳು ಮತ್ತು ಉತ್ತಮ ಹವಾಮಾನವು ಜನದಟ್ಟಣೆಗೆ ಕಾರಣವಾಗಿದೆ.

ಈ ತಿಂಗಳ 15 ರಿಂದ 20 ರ ಅವಧಿಯಲ್ಲಿ 50 ಲಕ್ಷ ವಿಶ್ವಾಸಿಗಳು ಮದೀನಾದ ಪ್ರವಾದಿ ಮಸೀದಿಗೆ ಆಗಮಿಸಿದ್ದಾರೆ. ಮಸ್ಜಿದುನ್ನಬವಿ ಅಧಿಕೃತರು ವಿಶ್ವಾಶಿಗಳಿಗೆ ತೊಂದರೆಯಾಗದಂತೆ ಪ್ರಾರ್ಥನೆ ನಿರ್ವಹಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲಿ, 1,35,242 ಮಂದಿಗೆ ರೌಳಾ ಷರೀಫ್‌ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ.

ಅಲ್ಲದೆ 4,67,221 ಸಂದರ್ಶಕರಿಗೆ ಪ್ರವಾದಿ ರೌಳಾ ಮತ್ತು ಅವರ ಸಹಚರರ ಸಮಾಧಿಗಳಲ್ಲಿ ಸಲಾಮ್ ನೀಡಲು ಅವಕಾಶ ನೀಡಲಾಗಿದೆ. 16,772 ಕ್ಕೂ ಹೆಚ್ಚು ಜನರು ವಿಶೇಷವಾಗಿ ವೃದ್ಧರಿಗಾಗಿ ವಿನ್ಯಾಸಗೊಳಿಸಲಾದ ಸೌಲಭ್ಯಗಳನ್ನು ಬಳಸಿದ್ದಾರೆ. ಉಪವಾಸ ನಿರತರಿಗೆ 119,400 ಬಾಟಲ್ ಝಂಝಂ ನೀರು ಮತ್ತು ಇಫ್ತಾರ್ ಆಹಾರವನ್ನು ವಿತರಿಸಲಾಗಿದೆ. ಅಲ್ಲದೆ, ವಸ್ತುಪ್ರದರ್ಶನ, ಗ್ರಂಥಾಲಯ ಮತ್ತು ಸಾರಿಗೆ ಸೇವೆಗಳನ್ನು ಸಹ ವಿಶ್ವಾಸಿಗಳು ಬಳಸಿಕೊಂಡರು. ಜನದಟ್ಟಣೆಯಿಂದ ಭದ್ರತೆ, ಸೇವೆ, ತುರ್ತು ಮತ್ತು ಸ್ವಯಂಸೇವಾ ಆರೋಗ್ಯ ವಿಭಾಗಗಳ ಚಟುವಟಿಕೆಗಳನ್ನು ಬಲಪಡಿಸಲಾಗಿದೆ ಎಂದು ಮಸ್ಜಿದುನ್ನಬವಿ ಏಜೆನ್ಸಿ ಮಾಹಿತಿ ನೀಡಿದೆ.

error: Content is protected !! Not allowed copy content from janadhvani.com