janadhvani

Kannada Online News Paper

ರಿಯಾದ್ : ಮಸ್‌ದರ್ ನೂತನ ಸಮಿತಿ ರಚನೆ

ರಿಯಾದ್ : ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಿರುವ ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ರಿಯಾದ್ ಘಟಕದ ರಚನೆ ದಿನಾಂಕ ಇತ್ತೀಚೆಗೆ ರಿಯಾದ್ ಅಲ್ ಬತ್ತಾದಲ್ಲಿರುವ ಲುಹಾ ಆಡಿಟೋರಿಯಂನಲ್ಲಿ ಮಸ್‌ದರ್ ಕಾರ್ಯಾಧ್ಯಕ್ಷರಾದ ಅಬೂಸುಫ್ಯಾನ್ H.I. ಇಬ್ರಾಹಿಂ ಮದನಿಯವರ ನೇತೃತ್ವದಲ್ಲಿ ಜರಗಿತು.

ಅಬ್ದುಲ್ಲಾ ಮದನಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿ.ಕೆ.ಎಸ್.ಸಿ. ರಿಯಾದ್ ಘಟಕದ ದಾಈ ಖಲೀಲ್ ಝುಹ್ರಿ ಖಿರಾಅತ್ ಪಾರಾಯಣಗೈದರು. ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜಮಾರ್ ಇವರು ಉತ್ತರ ಕರ್ನಾಟಕದ ಮುಸ್ಲಿಮರ ಧಾರ್ಮಿಕತೆಯ ಅಭಿವೃದ್ದಿಗಾಗಿ ಪ್ರತಿಯೊಬ್ಬರೂ ಮಸ್‌ದರ್ ಸಂಸ್ಥೆಯೊಂದಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುವ ಅಗತ್ಯಕತೆಯನ್ನು ಒತ್ತಿ ಹೇಳುತ್ತಾ ಸಭೆಯನ್ನು ಉದ್ಘಾಟಿಸಿದರು.

ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ಕಾರ್ಯಾಧ್ಯಕ್ಷರಾದ ಅಬುಸುಫ್ಯಾನ್ H.I. ಇಬ್ರಾಹಿಂ ಮದನಿಯವರು ಮಾತನಾಡುತ್ತಾ
ಉತ್ತರ ಕರ್ನಾಟಕದ ಮುಸ್ಲಿಮರ ಧಾರ್ಮಿಕ ಮೌಢ್ಯತೆ ಹಾಗೂ ಆರ್ಥಿಕ ಸಂಕಷ್ಟವನ್ನು ಸಾಕ್ಷ್ಯಚಿತ್ರದ ಮೂಲಕ ವಿವರಿಸುತ್ತಾ, ಅಲ್ಲಿನ ಮುಸ್ಲಿಮರ ನಿಸ್ಸಹಾಯಕ ಪರಿಸ್ಥಿತಿಯನ್ನು ಗಮದಲ್ಲಿಟ್ಟು ಅದಕ್ಕೆ ಪರಿಹಾರವಾಗಿ ಮಸ್‌ದರ್ ಸಂಸ್ಥೆ ಮಾಡುತ್ತಿರುವ ಶ್ಲಾಘನೀಯ ಶಿಕ್ಷಣ ಹಾಗೂ ಸಾಮಾಜಿಕ ಕ್ರಾಂತಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಸಭೆಯಲ್ಲಿ ಮಸ್‌ದರ್ ರಿಯಾದ್ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಹಾಸನ, ಕೋಶಾಧಿಕಾರಿಯಾಗಿ ಸ್ವಾಲಿಹ್ ಮುಕ್ಕಾ, ಉಪಾಧ್ಯಕ್ಷರುಗಳಾಗಿ ನಝೀರ್ ಜಯಪುರ ಹಾಗೂ ಅಶ್ರಫ್ ಮುಕ್ಕಾ, ಕಾರ್ಯದರ್ಶಿಯಾಗಿ ಸೈಫುಲ್ಲಾಹ್ ಕಾಟಿಪಳ್ಳ, ಸಲಹೆಗಾರರಾಗಿ ದಾವೂದ್ ಕಜಮಾರ್, ಅಬ್ದುಲ್ ಅಝೀಝ್ ಬಜ್ಪೆ, ಯೂಸುಫ್ ಕಳಂಜಿಬೈಲ್ ಆಯ್ಕೆಗೊಂಡರು.
ನೂತನ ಪ್ರಧಾನ ಕಾರ್ಯದರ್ಶಿ ಸಮೀರ್ ಹಾಸನ ಧನ್ಯವಾದಗೈದು ಅಬ್ದುಲ್ ಅಝೀಝ್ ಬಜ್ಪೆ ನಿರೂಪಿಸಿದರು.

error: Content is protected !! Not allowed copy content from janadhvani.com