janadhvani

Kannada Online News Paper

ಕಾಜೂರು: ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ

ಕಾಜೂರು: ಕಾಜೂರು ದರ್ಗಾ ಸಮಿತಿ ಅಧೀನದ ವಿದ್ಯಾ ಸಂಸ್ಥೆಗಳಾದ ರಾಹ ಪಬ್ಲಿಕ್ ಸ್ಕೂಲ್, ಹೈಸ್ಕೂಲ್, ಪಿಯುಸಿ ಮತ್ತು ಶರೀಅತ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರಖ್ಯಾತ ತರಬೇತುದಾರರಾದ ರಫೀಕ್ ಮಾಸ್ಟರ್ ರವರಿಂದ ವಿಶೇಷ ತರಬೇತಿ ಕಾರ್ಯಾಗಾರ 15.11.2023ರಂದು ಕಾಜೂರು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಯು. ಇಬ್ರಾಹಿಂ ರವರ ಅಧ್ಯಕ್ಷತೆಯಲ್ಲಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಅಕಾಡೆಮಿಕ್ ಡೈರೆಕ್ಟರ್ ಕೆ ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು. ಸಂಸ್ಥೆಯಲ್ಲಿ 2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ನಿಶಾ ಹಾಗೂ ಮುಹಮ್ಮದ್ ಸುಹೈಬ್, ಪಿಯುಸಿಯಲ್ಲಿ ಖತೀಜಾ ಬರೀರಾ ಹಾಗೂ ಫೌಝಿಯಾರವರನ್ನು ಸನ್ಮಾನಿಸಲಾಯಿತು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷರಾದ ಬದ್ರುದ್ದೀನ್, ಶಿಕ್ಷಣ ಸಂಸ್ಥೆಯ ಚೇರ್ಮೆನ್, ದರ್ಗಾ ಪ್ರದಾನ ಕಾರ್ಯದರ್ಶಿ ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್, ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳಾದ ಆಸಿಫ್, ಶರೀಫ್ ಹೈಟೆಕ್, ಮುಸ್ತಫ ಡಿ ಎಚ್, ನವಾಝ್ ಎನ್.ಎಂ ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಂಶಾದ್.ಎ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಮದ್ರಸ ಸದರ್ ಉಸ್ತಾದ್ ಜಮಾಲ್ ಲತೀಫಿ ದುಆ ನೆರವೇರಿಸಿದರು. ಸಂಸ್ಥೆಯ ಅಧ್ಯಾಪಕರಾದ ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೀಅತ್ ಕಾಲೇಜು ಉಪ ಪ್ರಾಂಶುಪಾಲರಾದ ಅಬ್ದುರ್ರಹ್ಮಾನ್ ಸಅದಿ ವಂದಿಸಿದರು.

error: Content is protected !! Not allowed copy content from janadhvani.com