ಕೊಡಗು: ಆಧುನಿಕ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರು ಹೋಗಿ ತಮ್ಮ ತನವನ್ನು ಕಳೆದುಕೊಂಡು ಮದ್ಯ-ಮಾದಕಗಳಿಗೆ ಬಲಿಯಾಗಿ ಸಮಾಜಕ್ಕೆ ಕಂಟಕವಾಗುವವರಿಗೆ ಧಾರ್ಮಿಕ-ನೈತಿಕ ಪಾಠ ಬೋಧಿಸಿ ಸಮಾಜದ ಒಳಿತಿಗಾಗಿ ಕಾರ್ಯಾಚರಿಸಿ ದುರ್ಬಲರ ಬೆನ್ನೆಲುಬಾಗಿರುವ ಒಂದು ಸಮೂಹವನ್ನು ಕಟ್ಟಿ ಬೆಳೆಸುವ ಸಂಘಟನೆಯೇ ಸುನ್ನೀ ಯುವಜನ ಸಂಘ.
ಕರ್ನಾಟಕದಲ್ಲಿ ಸಂಘಟನೆಗೆ ಇದೀಗ ಮೂವತ್ತರ ಸಂಭ್ರಮ. ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಘೋಷಣೆಯೊಂದಿಗೆ 2024ನೇ ಜನವರಿ 24ರಂದು SYS ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಅದರ ಪ್ರಚಾರಾರ್ಥ ಪ್ರತೀ ಜಿಲ್ಲೆಗಳಲ್ಲಿಯೂ ಯುವಜನೋತ್ಸವ ನಡೆಯಬೇಕಿದೆ.
2023ನೇ ನವೆಂಬರ್ 17 ಶುಕ್ರವಾರ ಸಂಜೆ 5 ಗಂಟೆಗೆ ಸಿದ್ಧಾಪುರದಲ್ಲಿ ನಡೆಯುವ
ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಕೊಳಕೇರಿಯವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಹಫೀಳ್ ಸಅದಿಯವರು ಉದ್ಘಾಟಿಸಲಿದ್ದಾರೆ.
ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸಿ (ಕಿಲ್ಲೂರ್ ತಂಙಳ್), SYS ರಾಜ್ಯ ನಾಯಕ ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಐದರೂಸಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಸೇರಿದಂತೆ ಹಲವು ಧಾರ್ಮಿಕ, ಮತ್ತು ಸಾಮಾಜಿಕ, ರಾಜಕೀಯ ನಾಯಕರುಗಳು ಭಾಗವಹಿಸುವಾಗ ವಹ್ಹಾಬ್ ಸಖಾಫಿ ಮಂಬಾಡ್ ಹಾಗೂ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಕಕ್ಕಿಂಜೆ ಮುಖ್ಯ ಭಾಷಣ ಮಾಡಲಿದ್ದಾರೆ.
ಗೋಷ್ಠಿಯಲ್ಲಿ ಹಾಜರಿದ್ದವರು :
ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಐದರೂಸಿ
ಹಮೀದ್ ಮುಸ್ಲಿಯಾರ್ ಕೊಳಕೇರಿ
ವಿ.ಪಿ.ಮೊಯ್ದೀನ್ ಪೊನ್ನತ್ ಮೊಟ್ಟೆ
ಅಹ್ಮದ್ ಮದನಿ ಗುಂಡಿಕೆರೆ
ಅಬ್ದುಲ್ಲ ನೆಲ್ಯಹುದಿಕೇರಿ
ಶಾಫಿ ಸಅದಿ ಸೋಮವಾರಪೇಟೆ