ರಿಯಾದ್: ಸ್ವದೇಶೀಕರಣವನ್ನು ಯಾವುದೇ ಕುಂದುಕೊರತೆಗಳಿಲ್ಲದ ರೀತಿಯಲ್ಲಿ ಜಾರಿಗೆ ತರಲಾಗುವುದು ಎಂದು ಸೌದಿ ಕಾರ್ಮಿಕ ಸಚಿವಾಲಯವು ಹೇಳಿದೆ.ದೇಶೀಯರ ನಿರುದ್ಯೋಗವನ್ನು ಕಡಿಮೆಗೊಳಿಸುವ ಯೋಜನೆಗಳು ಯಶಸ್ವಿಯಾಗುತ್ತಿವೆ.
ಅರ್ಹ ಸೌದಿ ನಾಗರಿಕರಿಗೆ ಅರ್ಹವಾದ ವೇತನವನ್ನು ಖಾತರಿಪಡಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.ಖಾಸಗಿ ವಲಯಗಳಿಗೆ ದೇಶೀಯ ಉದ್ಯೋಗಿಗಳನ್ನು ಆಕರ್ಷಿಸಲು ಏಳು ಪ್ರಮುಖ ಯೋಜನೆಗಳನ್ನು ಸೌದಿ ಸಚಿವಾಲಯವು ಕಾರ್ಯಗತಗೊಳಿಸುತ್ತಿದೆ.
ಸೌದಿ ನೌಕರರಿಗೆ ವಿಶೇಷ ಸವಲತ್ತುಗಳು, ಮನೆಯಲ್ಲೇ ಕುಳಿತು ಮಾಡುವ ಕೆಲಸವನ್ನು ಪ್ರೋತ್ಸಾಹಿಸುವುದು, ಉದ್ಯೋಗ ಪರಿಶೀಲನೆ ನೀಡುವುದು, ಅರೆಕಾಲಿಕ ಕೆಲಸವನ್ನು ಪ್ರೋತ್ಸಾಹಿಸಲು, ರಿಕ್ರೂಟ್ಮೆಂಟ್ ಮಾಡುವಾಗ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಅವಕಾಶ ನೀಡುವುದು, ದೇಶೀಯ ಕಾರ್ಮಿಕರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವುದು, ವಿದ್ಯಾ ಸಂಪನ್ನರಾದ ದೇಶೀಯರಿಗೆ ಅರ್ಹವಾಗಿ ಉನ್ನತ ಕೆಲಸಗಳನ್ನು ಕಾದಿರಿಸುವುದು ಮುಂತಾವುಗಳು ಯೋಜನೆಯ ಗುರಿಯಾಗಿದೆ.
ಈಗಾಗಲೇ ಅನೇಕ ವಲಯಗಳಲ್ಲಿ ಪೂರ್ಣ ದೇಶೀಕರಣವನ್ನು ಜಾರಿಗೆ ತರಲಾಗಿದೆ.ಮುಂದಿನ ದಿನಗಳಲ್ಲಿ ವಿದೇಶಿಯರು ಕೆಲಸ ಮಾಡುವ ಅನೇಕ ಇತರ ವಲಯಗಳಲ್ಲಿ ಸ್ವದೇಶೀಕರಣವನ್ನು ಜಾರಿಗೆ ತರಲಾಗುತ್ತದೆ.ಈ ಯೊಜನೆಯಿಂದಾಗಿ ಸಾವಿರಾರು ಭಾರತೀಯರು ಸೇರಿದಂತೆ ವಿದೇಶೀಯರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.