janadhvani

Kannada Online News Paper

ಯುಎಇ: ಗಾಝಾದಲ್ಲಿ ಚಿಕಿತ್ಸೆ ನೀಡಲು ಆಸಕ್ತಿ ಹೊಂದಿರುವ ಆರೋಗ್ಯ ಕಾರ್ಯಕರ್ತರಿಗೆ ನೋಂದಣಿ ಆರಂಭ

ಗ್ಯಾಲಂಟ್ ನೈಟ್-3 ಕಾರ್ಯಾಚರಣೆಯ ಭಾಗವಾಗಿ ಯುಎಇ, ಗಾಝಾದಲ್ಲಿ ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸುತ್ತಿದೆ.

ದುಬೈ: ಗಾಝಾದಲ್ಲಿ ಗಾಯಗೊಂಡಿರುವ ಪ್ಯಾಲೆಸ್ಟೀನಿಯರಿಗೆ ಚಿಕಿತ್ಸೆ ನೀಡಲು ಆಸಕ್ತಿ ಹೊಂದಿರುವ ಆರೋಗ್ಯ ಕಾರ್ಯಕರ್ತರಿಗೆ ಯುಎಇಯಲ್ಲಿ ನೋಂದಣಿ ಪ್ರಾರಂಭವಾಗಿದೆ ಎಂದು ಆರೋಗ್ಯ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಅಧಿಕಾರಿಗಳು ನೋಂದಣಿ ಲಿಂಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ಘೋಷಿಸಿದ ಗ್ಯಾಲಂಟ್ ನೈಟ್-3 ಕಾರ್ಯಾಚರಣೆಯ ಭಾಗವಾಗಿ ಯುಎಇ, ಗಾಝಾದಲ್ಲಿ ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸುತ್ತಿದೆ. ಇದರ ಭಾಗವಾಗಿ ಆರೋಗ್ಯ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. ನೋಂದಣಿ ಸಮಯದಲ್ಲಿ ಹೆಸರು, ಫೋನ್ ಸಂಖ್ಯೆ ಮತ್ತು ಎಮಿರೇಟ್ಸ್ ಐಡಿ ಸೇರಿದಂತೆ ವಿವರಗಳನ್ನು ಒದಗಿಸಬೇಕು. ಗಾಝಾ ಅಥವಾ ಈಜಿಪ್ಟ್ ಅಥವಾ ಎರಡರಲ್ಲೂ ಸೇವೆ ಸಲ್ಲಿಸಲು ಬಯಸುತ್ತೀರಾ ಎಂಬುದನ್ನು ಸಹ ನಿರ್ದಿಷ್ಟಪಡಿಸಬೇಕು.

https://gallantknight3.doh.gov.ae ಮೂಲಕ ನೋಂದಣಿ ಮಾಡಬಹುದು.

ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರ ಆದೇಶದ ಮೇರೆಗೆ 150 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಆಸ್ಪತ್ರೆಯಲ್ಲಿ ತೀವ್ರ ನಿಗಾ, ಅರಿವಳಿಕೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಪೀಡಿಯಾಟ್ರಿಕ್ಸ್ ಮತ್ತು ಸ್ತ್ರೀರೋಗ ವಿಭಾಗಗಳನ್ನು ಹೊಂದಿರುತ್ತದೆ. ಆಂತರಿಕ ಔಷಧ, ದಂತವೈದ್ಯಕೀಯ, ಮನೋವೈದ್ಯಕೀಯ ಮತ್ತು ಕುಟುಂಬ ಔಷಧದ ಚಿಕಿತ್ಸಾಲಯಗಳು ಸಹ ಕಾರ್ಯನಿರ್ವಹಿಸುತ್ತವೆ. ಆಸ್ಪತ್ರೆಯು ಸಿಟಿ ಇಮೇಜಿಂಗ್, ಲ್ಯಾಬೋರೇಟರಿ, ಫಾರ್ಮಸಿ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುತ್ತದೆ. ಆಸ್ಪತ್ರೆಯನ್ನು ಸ್ಥಾಪಿಸಲು ಬೇಕಾದ ಸಾಮಗ್ರಿಗಳನ್ನು ಐದು ವಿಮಾನಗಳಲ್ಲಿ ಗಾಜಾಕ್ಕೆ ತರಲಾಗಿದೆ.

ಅದೇ ಸಮಯದಲ್ಲಿ, ಗಾಝಾದ ಮೇಲೆ ಪರಮಾಣು ಬಾಂಬ್ ಹಾಕುವ ಇಸ್ರೇಲ್‌ನ ಹೆರಿಟೇಜ್ ರಕ್ಷಣೆಯ ಸಚಿವರ ಹೇಳಿಕೆಯನ್ನು ಯುಎಇ ತೀವ್ರವಾಗಿ ಖಂಡಿಸಿದೆ. ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯು ಆಕ್ರಮಣಕಾರಿ, ನಾಚಿಕೆಗೇಡಿನ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ನರಮೇಧಕ್ಕೆ ಕರೆ ನೀಡುವುದು ಕಳವಳಕಾರಿ ಹೇಳಿಕೆಯಾಗಿದ್ದು, ಗಾಝಾದಲ್ಲಿ ತಕ್ಷಣವೇ ಕದನ ವಿರಾಮಕ್ಕೆ ಯುಎಇ ಕರೆ ನೀಡಿದೆ.

error: Content is protected !! Not allowed copy content from janadhvani.com