janadhvani

Kannada Online News Paper

ಕೆಸಿಎಫ್ ಬಹರೈನ್: ರಾತೀಬ್ ಮಜ್ಲಿಸ್ ಹಾಗೂ ಮುಹ್ಯುದ್ದೀನ್ ಮಾಲ ಆಲಾಪನೆ

ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ವತಿಯಿಂದ ನಡೆದ ರಾತೀಬ್ ಮಜ್ಲಿಸ್ ಹಾಗೂ ಮುಹ್ಯುದ್ದೀನ್ ಮಾಲ ಆಲಾಪನೆ ದಿನಾಂಕ 10/11/2023 ರಂದು ಶುಕ್ರವಾರ ರಾತ್ರಿ ಗಂಟೆ 9 ಕ್ಕೆ ಸರಿಯಾಗಿ ಅಹ್ಮದ್ ಉಸ್ತಾದರ ಅಧ್ಯತೆಯಲ್ಲಿ ನಡೆಯಿತು.
ಅಬೂಬಕರ್ ಮದನಿ ಉಸ್ತಾದರು ಪ್ರಾರಂಭದಲ್ಲಿ ದುಆಗೈದರು.

ಮುಹ್ಯುದ್ದೀನ್ ಮಾಲ ಆಲಾಪನೆಯ ನಂತರ ಸಿದ್ದೀಖ್ ಉಸ್ತಾದರ ನೇತೃತ್ವದಲ್ಲಿ ರಾತೀಬ್ ಮಜ್ಲಿಸ್ ನಡೆಯಿತು.
ಟಿ.ಎಂ. ಉಸ್ತಾದರು ಪ್ಯಾಲೆಸ್ತೀನ್ ಜನತೆಯ ರಕ್ಷಣೆಗಾಗಿ ಹಾಗೂ ಮಜ್ಲಿಸಿನ ಯಶಸ್ವಿಗೆ ಪ್ರಯತ್ನಿಸಿದ ಕಾರ್ಯಕರ್ತರಿಗಾಗಿ ಭಕ್ತಿನಿರ್ಭರವಾಗಿ ದುಆ ನೆರವೇರಿಸಿದರು.

ಇಸ್ಮಾಈಲ್ ಸಅದಿ, ಅಬ್ದುಲ್ ಖಾದರ್ ಸಖಾಫಿ ಹಾಗೂ ಕೆಸಿಎಫ್ ಬಹರೈನ್ ನ್ಯಾಷನಲ್ ಕಮಿಟಿ ನೇತಾರರಾದ ಜಮಾಲುದ್ದೀನ್ ವಿಟ್ಲ, ಹಾರಿಸ್ ಸಂಪ್ಯ, ಖಲಂದರ್ ಉಸ್ತಾದ್, ನಝೀರ್ ಹಾಜಿ ದೇರ್ಲಕಟ್ಟೆ, ಮನ್ಸೂರ್ ಬೆಳ್ಮ, ಅಶ್ರಫ್ ಕಿನ್ಯ, ಮಜೀದ್ ಮಾದಾಪುರ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com