ಎಸ್ ಎಸ್ ಎಫ್ ಕೋಕಳ ಮಂಚಿ ಶಾಖೆ ಇದರ ವತಿಯಿಂದ ಬೃಹತ್ ಬುರ್ಧಾ ಮಜ್ಲಿಸ್ ಹಾಗೂ ಅಗಲಿದ ಮಹಾತ್ಮರ ಅನುಸ್ಮರಣಾ ಸಂಗಮವು ನವೆಂಬರ್ 15 ರಂದು ನಡೆಯಲಿದೆ.
ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ಇವರ ಪ್ರಾರ್ಥನೆ ಯೊಂದಿಗೆ ಚಾಲನೆಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ರಫೀಕ್ ಝುಹ್ರೀ ಇವರು ಸ್ವಾಗತ ಗಯ್ಯಲಿರುವರು ಶೈಖುನಾ ಮಂಚಿ ಉಸ್ತಾದರು ಉದ್ಘಾಟಿಸಲಿದ್ದಾರೆ. ಎಣ್ಮೂರು ಉಸ್ತಾದರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಅಗಲಿದ ಮಹಾತ್ಮರ ಅನುಸ್ಮರಣಾ ಪ್ರಭಾಷಣವನ್ನು ದಾರುಲ್ ಅಶ್ ಅರಿಯ ಸಂಸ್ಥೆಯ ಮ್ಯಾನೇಜರ್ ಸಿ. ಎಚ್ ಮಹಮ್ಮದಲಿ ಸಖಾಫಿ ಉಸ್ತಾದರು ನಡೆಸಲಿದ್ದಾರೆ.
ಬುರ್ಧಾ ಮಜ್ಲಿಸ್ ನಲ್ಲಿ ಸಯ್ಯಿದ್ ತ್ವಾಹಾ ತಂಙಳ್ ಹಾಗೂ ಶಾಕಿರ್ ಫಾಳಿಲಿ ನಾಸಿಫ್ ಕ್ಯಾಲಿಕೆಟ್ ಶಾಯಿನ್ ಬಾಬು ಮೊದಲಾದ ಮಾದಿಹ್ ಗಳು ಭಾಗವಹಿಸಲಿದ್ದಾರೆ ಮತ್ತು ಊರಿನ ಪರ ಊರಿನ ಗಣ್ಯ ವ್ಯಕ್ತಿಗಳು ಪ್ರಸ್ತುತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.