janadhvani

Kannada Online News Paper

ವಿಟ್ಲ ಸರಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

ವಿಟ್ಲ: ಇಲ್ಲಿನ ಸರ್ಕಾರಿ ಸಮುದಾಯ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾಂಕೇತಿಕ ಪ್ರತಿಭಟನೆಯನ್ನು ದಕ್ಷಿಣ ಕನ್ನಡ ದಲಿತ್ ಸೇವಾ ಸಮಿತಿ ರೈತ ಸಂಘ, ಖಿದ್ಮತ್ ಫೌಂಡೇಶನ್ ವಿಟ್ಲ ವಲಯ ಇವುಗಳ ಜಂಟಿ ಆಶ್ರಯದಲ್ಲಿ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಂಘ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ರೈತ ಸಂಘ ನಾಯಕರಾದ ರಾಮಣ್ಣ, ವಿಟ್ಲ ಖ್ಗದ್ಮತ್ ಫೌಂಡೇಶನ್ ಅಧ್ಯಕ್ಷರಾದ ಹಾಜಿ ಹಬ್ದುಲ್ ಹಮೀದ್ ಕೊಡಂಗಾಯಿ ಮಾತನಾಡಿ ಆಸ್ಪತ್ರೆಯ ವ್ಯವಸ್ಥೆಗಳು ಮುಂದಿನ ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ಈ ಹೋರಾಟ ದೊಡ್ಡಮಟ್ಟದಲ್ಲಿ ಮುಂದರಿಯುತ್ತದೆ ಎಂದರು.

ಜನಪ್ರತಿನಿಧಿಗಳು, ಬಡವರ ಪಾಲಿಗೆ ಆಸರೆಯಾಗಿರುವ ವಿಟ್ಲ ಸರ್ಕಾರಿ ಆಸ್ಪತ್ರೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶೀಘ್ರ ವ್ಯವಸ್ಥೆ ಸರಿಪಡಿಸಬೇಕು. ಸರ್ಜನ್ ವೈಧ್ಯರು ಎಕ್ಸೆರೆ, ಸ್ಕ್ಯಾನಿಂಗ್, ಡಯಾಲಿಸ್ ಸೆಂಟರ್ ಹಾಗೂ ಗರ್ಭಿಣಿಯರಿಗೆ ಸಿಸೇರಿಯನ್ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ವೈಧ್ಯಯರ ಸೇವೆ ಒದಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿ ಭೇಟಿ ನೀಡುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಲಾಯಿತು.

ಇದೇ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದ ಕಾರಣದಿಂದ ಧರಣಿಯನ್ನು ತಾತ್ಕಾಲಿಕ ಹಿಂಪಡೆಯಲಾಯಿತು.

ಶೀಘ್ರದಲ್ಲೇ ಸಮಸ್ಯೆ ಬಗೆಹರಿಯದಿದ್ದಲ್ಲಿ ವಿಟ್ಲ ಪರಿಸರದ ಎಲ್ಲಾ ಸಂಘಟನೆಗಳು ಜೊತೆ ಸೇರಿ ಮತ್ತೆ ಹೋರಾಟ ಮುಂದುವರಿಸುವುದಾಗಿ
ನಾಯಕರು ತಿಳಿಸಿದರು. ಈ ಸಂದರ್ಭದಲ್ಲಿ ದಲಿತ್ ಸಮಿತಿ ಜಿಲ್ಲಾಧ್ಯಕ್ಷರು ದಲಿತ್ ಸೇವಾ ಸಮಿತಿಯ ನಾಯಕರು ಖಿದ್ಮತ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಹಾಗೂ ಖಿದ್ಮತ್ ಫೌಂಡೇಶನ್ ಸಮಿತಿಯ ನಾಯಕರು ಉಪಸ್ಥಿತರಿದ್ದರು ಚಂದ್ರಶೇಖರ್ ಯು ಸ್ವಾಗತಿಸಿದರು.

error: Content is protected !! Not allowed copy content from janadhvani.com