janadhvani

Kannada Online News Paper

ಬಜ್ಪೆ ಚತುಷ್ಪಥ ರಸ್ತೆಯ ಅವ್ಯವಸ್ಥೆ- ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಧರಣಿ ಸತ್ಯಾಗ್ರಹ

ಬಜ್ಪೆ:ಇಲ್ಲಿನ ಮುಖ್ಯ ರಸ್ತೆಯ ಚತುಷ್ಪಥ ಯೋಜನೆಯ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವ ವಿರುದ್ಧ ನಾಗರಿಕರು ಆಕ್ರೋಶ ಗೊಂಡಿದ್ದು, ಅಧಿಕಾರಿಗಳ ವಿರುದ್ಧ ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ.

ಈ ಪ್ರಯುಕ್ತ ನ.7ರಂದು MJM ಸಭಾಂಗಣದಲ್ಲಿ ಬಜ್ಪೆ ಚತುಷ್ಪಥ ರಸ್ತೆಯ ಅವ್ಯವಸ್ಥೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ಸಭೆ ನಡೆಸಿ,ದಿನಾಂಕ 16/11/23 ರ ಬೆಳಿಗ್ಗೆ 9.30 ಕ್ಕೆ ಧರಣಿ ಸತ್ಯಾಗ್ರಹ ಮಾಡುವುದಾಗಿ ತೀರ್ಮಾನಿಸಿದೆ

ಸಭೆಯಲ್ಲಿ ಗೌರವ ಅತಿಥಿಯಾಗಿ ದ.ಸಂಘ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್ ,ಸಂಚಾಲಕರಾದ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಂಜಿನಿಯರ್ ಇಸ್ಮಾಯಿಲ್,MJM ಮಸೀದಿಯ ಅಧ್ಯಕ್ಷರಾದ ಖಾದರ್ ಸಾಬ್,ಅಥಾವುಲ್ಲಾ ಜೋಕಟ್ಟೆ ,
ದಲಿತ ಸಂಘ ಸಮಿತಿಯ ರಾಕೇಶ್ ಕರಂಬಾರ್,ಹಿರಿಯರಾದ ಥೋಮಸ್,
SSF ಮುಖಂಡರಾದ ಸಲೀಲ್ ಡಿಲಕ್ಸ್ ,ಮುಫೀದ್ ,ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ,ರಹಿಮಾನ್ ಕಳವಾರ್,ಅಝರ್, ಅನ್ವರ್ ಬಜ್ಪೆ ,ಹಕೀಮ್ ಕೊಳಂಬೆ ,ಅಶ್ರಫ್ ಕೊಳಂಬೆ,ಏರ್ಪೋರ್ಟ್ ಹಕೀಮ್ ,ದಲಿತ ಸಂಘ ಸಮಿತಿಯ ಲಕ್ಷ್ಮೀಶ ಹಿರಿಯರಾದ ಮೊನಕ,ಅಬ್ಬಾಸ್ ಸೂರಲ್ಪಾಡಿ ,ಇರ್ಷಾದ್ ಬಜ್ಪೆ ,ಅಶ್ರಫ್ ಜೋಕಟ್ಟೆ ,ಇಕ್ಬಾಲ್ ಪ್ಯಾರಾ ,ಹಸೈನಾರ್ ಬಜ್ಪೆ ,ನಿಸಾರ್ ಮಾರ್ಕೆಟ್ ಗ್ರಾ ಪಂ ಮಾಜಿ ಅಧ್ಯಕ್ಷರಾದ ಮೊಹಮದ್ ಷರೀಫ್ ಗ್ರಾ ,ಪಂ .ಸದಸ್ಯರುಗಳಾದ ಜೇಕಬ್ ಪಿರೇರಾ,ನಜೀರ್ ಕಿನ್ನಿಪದವು, ಮನ್ಸೂರು,ಕುಡುಂಬಿ ಸಮಾಜದ ನಾಯಕರಾದ ಶೇಖರ್ ಗೌಡ ,ಮುಖಂಡರಾದ ಎಶೋದರ ಆಚಾರ್ಯ. ಮತ್ತು ಊರಿನ ಸಂಘ ಸಂಸ್ಥೆಯ ನಾಯಕರುಗಳು ಊರಿನ ಹಿರಿಯರು ಭಾಗವಹಿಸಿದರು.

error: Content is protected !! Not allowed copy content from janadhvani.com