janadhvani

Kannada Online News Paper

ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ CA.ಅಬ್ದುಲ್ಲಾ- ಮುಈನುಸುನ್ನಾಅಬೂದಾಬಿ ಘಟಕದಿಂದ ಸನ್ಮಾನ

ಅಬೂದಾಬಿ: ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ‌ ಅಬೂದಾಬಿ ಘಟಕದ ವತಿಯಿಂದ ನಡೆದ ಎಜುಕಾನ್ಫೆರನ್ಸ್ ಹಾಗು ಮುಹಬ್ಬತೇ ಜೀಲಾನಿ ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಅನಿವಾಸಿ ಕನ್ನಡಿಗ, ಮುಈನುಸುನ್ನಾ ವಿದ್ಯಾಸಂಸ್ಥೆಯ ಪ್ರಧಾನ ಹಿತೈಷಿ CA ಅಬ್ದುಲ್ಲಾ ಮದುಮೂಲೆ ಯವರನ್ನು ಸನ್ಮಾನಿಸಲಾಯಿತು.

ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಅಧ್ಯಕ್ಷ ರಾದ ಸಯ್ಯಿದ್ ಶಹೀರ್ ಅಲ್ ಬುಖಾರಿ ಯವರ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶ ವನ್ನು KCF ಯುಎಇ ಅಧ್ಯಕ್ಷ ರಾದ ಇಬ್ರಾಹಿಂ ಸಖಾಫಿ ಉದ್ಘಾಟಿಸಿದರು.. ಮುಈನುಸುನ್ನಾ ಫೌಂಡರ್ ಡೈರೆಕ್ಟರ್ ಕೆ.ಎಂ ಮುಸ್ತಫಾ ನ‌ಈಮಿ ಅಲ್ ಹಿಮಮಿ ಹಾವೇರಿ ಯವರು ಕರ್ನಾಟಕದ ಶೈಕ್ಷಣಿಕ ಪ್ರಗತಿ ಮತ್ತು ನಿರೀಕ್ಷೆ ಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

KCF ಅಂತಾರಾಷ್ಟ್ರೀಯ ಸಮಿತಿ ನಾಯಕರಾದ ಅಬ್ದುಲ್ ಹಮೀದ್ ಸ‌ಅದಿ,
ಬ್ಯಾರಿಸ್ ವೆಲ್ಫೇರ್ ಫಾರಂ ಇದರ ಅಧ್ಯಕ್ಷ ರಾದ ಮುಹಮ್ಮದ್ ಅಲಿ ಉಚ್ಚಿಲ, KCF ಅಬೂದಾಬಿ ಪ್ರಧಾನ ಕಾರ್ಯದರ್ಶಿ ಕಬೀರ್ ಬಾಯಂಪಾಡಿ ಮುಂತಾದವರು ಮಾತನಾಡಿದರು.

ಮುಈನುಸುನ್ನಾ ಅಬೂದಾಬಿ ಅಧ್ಯಕ್ಷ ರಾದ ಇಕ್ಬಾಲ್ ಕುಂದಾಪುರ,ಯುಎಇ ರಾಷ್ಟ್ರೀಯ ಸಮಿತಿ ನಾಯಕರುಗಳಾದ ಮುಹಮ್ಮದ್ ಕುಂಞಿ ಹಾಜಿ ಅಡ್ಕ,, ನವಾಝ್ ಹಾಜಿ ಕೋಟೆಕಾರ್,ಬ್ರೈಟ್ ಇಬ್ರಾಹಿಂ ಹಾಜಿ, ಮುಹಮ್ಮದ್ ಅಲಿ ವಳವೂರು ,KH ಮುಹಮ್ಮದ್ ಸಖಾಫಿ, ಮುಂತಾದವರು ಉಪಸ್ಥಿತರಿದ್ದರು..

KCF ‌ ‍‌‌‌ಅಬೂದಾಬಿ ಅಧ್ಯಕ್ಷ ರಾದ ಹಸೈನಾರ್ ಅಮಾನಿ ಕಾರ್ಯಕ್ರಮ ವನ್ನು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ವಂದಿಸಿದರು…

error: Content is protected !! Not allowed copy content from janadhvani.com