janadhvani

Kannada Online News Paper

ಕುಂಬ್ರ ಮರ್ಕಝ್‌ ಬೆಳ್ಳಿಹಬ್ಬ: ‘ಸಿಲ್ವರಿಯಂ’ ಘೋಷಣೆ

ರಾಜ್ಯದ ಪ್ರತಿಷ್ಠಿತ ಮಹಿಳಾ ವಿದ್ಯಾಲಯ ಕುಂಬ್ರ ಮರ್ಕಝುಲ್ ಹುದಾ, ಇಪ್ಪತ್ತೈದನೇ ವರ್ಷಾಚರಣೆಯ ಸನಿಹದಲ್ಲಿದ್ದು ‘ಸಿಲ್ವರಿಯಂ’ ಎಂಬ ಹೆಸರಿನಲ್ಲಿ ಎರಡು ವರ್ಷಗಳ ಕಾಲ ವಿಜೃಂಭಣೆಯಿಂದ ಬೆಳ್ಳಿಹಬ್ಬವನ್ನು‌
ಆಚರಿಸಲು ನಿರ್ಧರಿಸಲಾಗಿದೆ.

2001 ಜನವರಿ 26 ರಂದು ಶಿಲಾನ್ಯಾಸ ಮಾಡಲ್ಪಟ್ಟ ಮರ್ಕಝ್‌ಗೆ 2026 ಜನವರಿ 26 ರಂದು ಇಪ್ಪತ್ತೈದು ವರ್ಷಗಳು ಭರ್ತಿ‌ಯಾಗುತ್ತಿದ್ದು ಇದರ ಅಂಗವಾಗಿ‌ 2024 ಜನವರಿ‌ 26 ರಿಂದ 2026 ಜನವರಿ 26 ತನಕ ಸಿಲ್ವರ್ ಜುಬಿಲೀ ಅಭಿಯಾನ‌ ಹಮ್ಮಿಕೊಳ್ಳಲಾಗುವುದು.

ಇದೇ ತಿಂಗಳ (ನವಂಬರ್) 26 ರಂದು ಸಿಲ್ವರಿಯಂ‌ ಸ್ವಾಗತ ಸಮಿತಿ‌ ರಚನಾ ಸಭೆಯು ಕುಂಬ್ರದಲ್ಲಿ‌ ನಡೆಯಲಿದ್ದು‌ ಅಲ್ಲಿ‌ ಎರಡು ವರ್ಷಗಳ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು.

ಈ ಕುರಿತು ಸಂಸ್ಥೆಯ‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರೆಸಿಡೆಂಟ್ ಅರಿಯಡ್ಕ ಅಬ್ದರಹ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಡಾ.ಝೈನೀ ಕಾಮಿಲ್ ಚರ್ಚೆಗೆ ನೇತೃತ್ವ ವಹಿಸಿದರು..
ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿ‌ ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com