ಬಂಟ್ವಾಳ: ಸುರಿಬೈಲು ದಾರುಲ್ ಅಶ್ಅರಿಯ್ಯ ಸಿಲ್ವರ್ ಜ್ಯೂಬಿಲಿ ಪ್ರಯುಕ್ತ ‘ಎಕ್ಸ್ಪೋ’ ವಸ್ತು ಪ್ರದರ್ಶನವನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ ಉದ್ಘಾಟಿಸಿದರು.
ಅಶ್ ಅರಿಯ್ಯ ಮುದರ್ರಿಸ್ ಸಿದ್ದೀಕ್ ಸಖಾಫಿ ಅಧ್ಯಕ್ಷತೆ ವಹಿಸಿದರು, ಸಿ .ಎಚ್ ಮುಹಮ್ಮದ್ ಅಲೀ ಸಖಾಫಿ ಅಶ್ ಅರಿಯ್ಯ ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್ ಕುಕ್ಕಾಜೆ, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ಯುವ ಕಾಂಗ್ರೆಸ್ ಪಾಳಣೆಮಂಗಳೂರು ಬ್ಲಾಕ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ, ತಾಜುಲ್ ಉಲಮಾ ಮದ್ರಸ ಅಧ್ಯಕ್ಷ ಅಬ್ದುಲ್ಲಾ ನಾರಂಕೋಡಿ, ಬೋಳಂತೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ರೈ ನಾರ್ಶ, ಕೊಲ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಸಿ ಎಚ್ ರಝ್ಝಾಕ್, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯ ಹಮೀದ್ ಸುರಿಬೈಲು, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯ್ಯ ನಾರ್ಶ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಇಬ್ರಾಹಿಂ ಕರೀಂ ಕದ್ಕಾರ್, ನೂರುಲ್ ಹುದಾ ಮದ್ರಸ ಮತ್ತು ಮಸೀದಿ ನೆಲ್ಲಿಗುಡ್ಡೆ ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಬೇಗ್ ಕಲ್ಲಡ್ಕ ಫಾರೂಕ್ ಕೆ.ಪಿಬೈಲ್. ಹಾಗೂ ಶರೀಫ್ ಕುಲ್ಯಾರ್ ಉಪಸ್ಥಿತರಿದ್ದರು. ಸೈಫುಲ್ ಹುದಾ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷ ಮುಜ್ ತಬಾ ಸ್ವಾಗತಿಸಿ ವಂದಿಸಿದರು.