ಕೇರಳದ ಕಳಮಶ್ಶೇರಿ ಎಂಬಲ್ಲಿ ಕ್ರೈಸ್ತ ಸಮುದಾಯದವರ ಸಭೆಯಲ್ಲಿ ಬಾಂಬ್ ಸ್ಪೋಟ ನಡೆದ ಬೆನ್ನಲ್ಲೇ ಈ ಎರಡು ಚಾನೆಲ್ ಗಳು ಮಸ್ಲಿಮರ ಮೇಲೆ ಆರೋಪ ಹೊರಿಸಿ ಸುಳ್ಳು ಬಿತ್ತರಿಸಿದವು. ಎಷ್ಟರ ಮಟ್ಟಿಗೆ ಅದು ಮುಂದುವರಿಯಿತೆಂದರೆ ತಲೆಮೇಲೆ ಟೊಪ್ಪಿ ಹಾಕಿಕೊಂಡಿರುವ ಓರ್ವ ಮುಸ್ಲಿಮನ ಫೋಟೋ ತೋರಿಸಿ ಬಾಂಬ್ ಸ್ಪೋಟಿಸಿದ್ದು ಇವನು ಎಂದು ಪ್ರಚಾರ ಮಾಡಿದುವು.
ಇದೀಗ ಬಾಂಬ್ ಸ್ಪೋಟ ನಡೆಸಿದ್ದು ನಾನೇ ಎಂದು ಕ್ರೈಸ್ತ ಸಮುದಾಯಕ್ಕೆ ಸೇರಿದ ಮಾಟಿನ್ ಎಂಬಾತ ಹೇಳಿಕೆ ನೀಡಿ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಕರ್ನಾಟಕದ ಈ ಎರಡು ಚಾನೆಲ್ ಗಳು ತೀವ್ರ ಮುಖಭಂಗಕ್ಕೀಡಾಗಿವೆ.
ಅಪರಾಧಿ ತಪ್ಪೊಪ್ಪಿಕೊಳ್ಳದಿದ್ದಲ್ಲಿ ಈ ಆರೊಪ ಮುಸ್ಲಿಮರ ಮೇಲೆ ಉಳಿದು ಇಲ್ಲಿ ಏನು ಸಂಭವಿಸುತ್ತಿತ್ತು ಎಂಬುದನ್ನು ಊಹಿಸಿ ನೋಡಿ!
ಈ ಚಾನೆಲ್ ಗಳು ಬಿತ್ತರಿಸುವ ಸುದ್ದಿಗಳು ನಿರಾಧಾರ ಎಂಬುದು ಇದರಿಂದ ಸಾಬೀತಾಗಿದೆ. ಯಾವ ಆಧಾರದಲ್ಲಿ ಇವು ಬಾಂಬ್ ಸ್ಪೋಟ ನಡೆಸಿದ್ದು ಜಿಹಾದಿಗಳು ಎಂಬ ತೀರ್ಮಾನಕ್ಕೆ ಬಂದುವು? ಯಾವ ಆಧಾರದಲ್ಲಿ ಮುಸ್ಲಿಮನ ಫೋಟೋ ಹಾಕಿದುವು? ಇಲ್ಲಿನ ಕೋಮುವಾದಿಗಳ ಅಂಡು ನೆಕ್ಕಿ ಪ್ರಚಾರ ದಕ್ಕಿಸಿಕೊಳ್ಳುವ ತೆವಲಿನಲ್ಲಿ ಅದೆಂತಹ ಅಪಾಯಕಾರಿ ಸುಳ್ಳುಗಳನ್ನು ಬಿತ್ತರಿಸಲೂ ಸಿದ್ಧವಾಗುವ ಈ ಚಾನೆಲ್ ಗಳು ಇಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದು ಇದರಿಂದ ಪಕ್ಕಾ ಆಗಿದೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಪಣತೊಟ್ಟ ಕಾಂಗ್ರೆಸ್ ಸರಕಾರದ ಪ್ರಯತ್ನವನ್ನು ಸುಟ್ಟು ಬೂದಿ ಮಾಡಲು ಹೊರಟಿರುವ ಈ ಚಾನೆಲ್ ಗಳನ್ನು ಸರಕಾರ ಶೀಘ್ರದಲ್ಲೇ ಮುಚ್ಚಿಸಬೇಕಾಗಿದೆ.
ಸುಳ್ಳು ಸುದ್ಧಿ ಹಬ್ಬಿಸಿ ಒಂದು ಸಮುದಾಯದ ಮೇಲೆ ವೃಥಾ ಆರೋಪ ಹೊರಿಸಿ ರಾಜ್ಯವನ್ನು ಕೋಮುದಳ್ಳುರಿಯಲ್ಲಿ ಉರಿಸಲೆತ್ನಿಸುತ್ತಿರುವ ಈ ಹಲ್ಕಟ್ ಚಾನೆಲ್ ಗಳು ರಾಜ್ಯಕ್ಕೂ ದೇಶಕ್ಕೂ ದ್ರೋಹ ಬಗೆಯುತ್ತಿವೆ. ಇವೆರಡೂ ತೀವ್ರ ಅಪಾಯಕಾರಿ ಚಾನೆಲ್ ಗಳು. ಹುಡುಗಿಯಿಂದ ಚಪ್ಪಲಿಯಲ್ಲಿ ಪೆಟ್ಟು ತಿಂದ ಪವರ್ ಟಿ.ವಿ. ಯ ರಾಕೇಶ್ ಶೆಟ್ಟಿ ತಾನು ಸಿದ್ಧರಾಮಯ್ಯನವರ ಪರ ಎಂದು ಪೋಸು ಕೊಡುತ್ತಿದ್ದಾನೆ. ಸಿದ್ಧರಾಮಯ್ಯನವರ ಪ್ರಯತ್ನಕ್ಕೆ ಮಣ್ಣೆರಚಿ ರಾಜ್ಯಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಇವನ ಪೋಸು ಬರೀ ಡೋಂಗಿ ಎಂಬುದು ಜಾಹಿರಾಗಿದೆ.
ಸುವರ್ಣ ಚಾನೆಲ್ ಈಗಾಗಲೇ ಸುವ್ವರ್ ಚಾನೆಲ್ ಎಂಬ ಅಪಖ್ಯಾತಿಗೆ ಒಳಗಾಗಿದೆ. ಇಂತಹ ಚಾನೆಲ್ ಗಳು ರಾಜ್ಯಕ್ಕೆ ಯಾಕೆ ಬೇಕು? ಟಿ.ಆರ್. ಪಿ. ಗಾಗಿ ಮಲತಿನ್ನಲೂ ತಯ್ಯಾರಾಗುವ ಇಂತಹ ನಾಚಿಕೆಗೆಟ್ಟ ಚಾನೆಲ್ ಗಳನ್ನು ಮುಂದುವರಿಯಗೊಡುವುದು ಅಪಾಯಕಾರಿಯಾಗಿದೆ. ಮಾನ್ಯ ಸಿದ್ಧರಾಮಯ್ಯನವರು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಸಮಸ್ತ ಸಭ್ಯ ನಾಗರಿಕರ ಪರವಾಗಿ ಬೇಡಿಕೊಳ್ಳುತ್ತಿದ್ದೇನೆ.
✍️ಡಿ.ಐ. ಅಬೂಬಕರ್ ಕೈರಂಗಳ