janadhvani

Kannada Online News Paper

ಕಿನ್ಯಾ ‘ಪುದಿಯ ಕಂಡತ್ತಿಲ್’ ಫ್ಯಾಮಿಲಿ: ಡಾಕ್ಟರೇಟ್ ಬಿರುದು ಪಡೆದವರಿಗೆ ಸನ್ಮಾನ

ಕುಟುಂಬದ ಹಿರಿಮೆಗೆ ಪಾತ್ರರಾದ, ಪಿಪಿಟಿಟಿಸಿ ಬಿರುದು ಪಡೆದ ನಾಫಿಲಾ ಸಬೀನ್, ಡಾಕ್ಟರೇಟ್ ಬಿರುದು ಪಡೆದ ಡಾ.ಅಬ್ದುಲ್ ರಹ್ಮಾನ್ ನೌಫಲ್ , ಡಾ. ಆಯಿಶಾ ಮಸ್ರೂರ ಇವರನ್ನು ಸನ್ಮಾನಿಸಲಾಯಿತು

ಉಳ್ಳಾಲ: ಕಿನ್ಯಾ ಬೆಳರಿಂಗೆ ಮರ್ಹೂಂ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್(ಮಣಿಪಾಲ್ ಉಸ್ತಾದ್) ಹಾಗೂ ಫಾತಿಮಾ ಅವರ ‘ಪುದಿಯ ಕಂಡತ್ತಿಲ್’ ಫ್ಯಾಮಿಲಿಯ ಕುಟುಂಬ ಸಮ್ಮಿಲನ ಹಾಗೂ ಸಾಧಕ ಕುಟುಂಬ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 22 ರಂದು ಬೈತುನ್ನೂರ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಮೆಗೆ ಪಾತ್ರರಾದ, ಪಿಪಿಟಿಟಿಸಿ ಬಿರುದು ಪಡೆದ ಕುಟುಂಬದ ಕಿರಿಯ ಮಗಳು ನಾಫಿಲಾ ಸಬೀನ್(ಅಬ್ದುಲ್ಲಾ ರಹ್ಮಾನಿಯ ಪತ್ನಿ) ಡಾಕ್ಟರೇಟ್ ಬಿರುದು ಪಡೆದ ಡಾ.ಅಬ್ದುಲ್ ರಹ್ಮಾನ್ ನೌಫಲ್(ಅಬ್ದುಲ್ ಹಮೀದ್ ಮದನಿ-ಸಅದಿಯಾ ದಂಪತಿಗಳ ದ್ವಿತೀಯ ಪುತ್ರ) ಹಾಗೂ ಮಸ್ಊದ್ ಅಲಿ- ಝೊಹರಾ ದಂಪತಿಗಳ ಮಕ್ಕಳಾದ ಡಾ. ಆಯಿಶಾ ಮಸ್ರೂರ ಮತ್ತು E&E ಬಿರುದನ್ನು ಪಡೆದ ಮುಹಮ್ಮದ್ ಮಅ್ ಸೂಮ್ ಇವರನ್ನು ಅಜ್ಜಿ ಫಾತಿಮಾ ಅವರ ನೇತೃತ್ವದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಶೀರ್ ಅಹ್ಮದ್, ಹಮೀದ್ ಮದನಿ, ಶರಫುದ್ದೀನ್, ಅಸ್ಲಂ ಫೈಝಿ, ಅಬ್ದುಲ್ಲಾ ರಹ್ಮಾನಿ, ಸಾದಿಖ್ ಶರೀಫ್, ಮೂಸಾ ಸಲೀಂ ಸಹಿತ ಪುದಿಯ ಕಂಡತ್ತಿಲ್ ಫ್ಯಾಮಿಲಿಯ ಮಕ್ಕಳು, ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳು ಪಾಲ್ಗೊಂಡಿದ್ದರು.

ಪುಟಾಣಿ ಮಕ್ಕಳು ಕಿರು ಕಾಣಿಕೆಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದರು.