janadhvani

Kannada Online News Paper

ಗಾಝಾ ‘ಅಲ್ ಖದುಸ್’ ಆಸ್ಪತ್ರೆಗೂ ಬಾಂಬ್ ದಾಳಿ ಬೆದರಿಕೆ- ಜನರ ಸ್ಥಳಾಂತರಕ್ಕೆ ಇಸ್ರೇಲ್ ಆದೇಶ

ಅಮಾಯಕ ನಾಗರಿಕರು ವಾಸಿಸುವ ಆಸ್ಪತ್ರೆಗಳಿಗೆ ಬಾಂಬ್ ದಾಳಿ ನಡೆಸುವ ಇಸ್ರೇಲಿ ಆಕ್ರಮಣ ಪಡೆಗಳನ್ನು ತಡೆಯುವ ಯಾವುದೇ ವಿಶ್ವ ಶಕ್ತಿ ಇಲ್ಲವೇ?- ರೆಡ್ ಕ್ರೆಸೆಂಟ್

ಗಾಝಾ: ಅಲ್-ಅಹ್ಲಿ ಆಸ್ಪತ್ರೆಯ ನಂತರ, ಇಸ್ರೇಲ್ ಮತ್ತೆ ಗಾಝಾದ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡಿದೆ. ಗಾಝಾ ಪಟ್ಟಿಯಲ್ಲಿರುವ ಅಲ್-ಖುದುಸ್ ಆಸ್ಪತ್ರೆಯ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲಿ ಪಡೆಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಪ್ಯಾಲೆಸ್ಟೈನ್ ರೆಡ್ ಕ್ರೆಸೆಂಟ್ ಸೊಸೈಟಿ (PRCS) ಮಾಹಿತಿ ಬಿಡುಗಡೆ ಮಾಡಿದೆ.

ಈ ಹಿಂದೆ ಅಲ್ ಅಹ್ಲಿ ಅರಬ್ ಆಸ್ಪತ್ರೆಗೆ ಆದೇಶ ನೀಡಿದಂತೆ, ಅಲ್-ಖುದುಸ್ ಆಸ್ಪತ್ರೆಯನ್ನು ಆದಷ್ಟು ಬೇಗ ಸ್ಥಳಾಂತರಿಸುವಂತೆ ಇಸ್ರೇಲ್ ಅಂತಿಮ ಆದೇಶ ನೀಡಿದೆ. ಇಸ್ರೇಲ್ ಆಕ್ರಮಣದಿಂದ ನಿರಾಶ್ರಿತರಾದ ಸುಮಾರು 12,000 ಜನರು ಈ ಆಸ್ಪತ್ರೆಯಲ್ಲಿ ವಾಸಿಸುತ್ತಿದ್ದಾರೆ. ಶೇ.70 ರಷ್ಟು ಮಕ್ಕಳು ಮತ್ತು ಮಹಿಳೆಯರು. ಇಸ್ರೇಲ್‌ನ ಬೆದರಿಕೆಯ ಹಿನ್ನೆಲೆಯಲ್ಲಿ ಇವರ ಜೀವಕ್ಕೆ ಅಪಾಯವಿದೆ ಎಂದು PRCS ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

“ಈ ಬೆದರಿಕೆ ನಿಜವಾದಲ್ಲಿ, ಈ ಸ್ಥಳವು ಬೂದಿಯಾಗಲಿದೆ.ಅಮಾಯಕ ನಾಗರಿಕರು ವಾಸಿಸುವ ಆಸ್ಪತ್ರೆಗಳಿಗೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ಇಸ್ರೇಲಿ ಆಕ್ರಮಣ ಪಡೆಗಳನ್ನು ತಡೆಯುವ ಯಾವುದೇ ವಿಶ್ವ ಶಕ್ತಿ ಇಲ್ಲವೇ? ಅಲ್-ಅಹ್ಲಿ ಆಸ್ಪತ್ರೆಯಂತೆಯೇ ಮತ್ತೊಂದು ದುರಂತ ಮರುಕಳಿಸದಂತೆ ಅಂತಾರಾಷ್ಟ್ರೀಯ ಸಮುದಾಯವು ತುರ್ತಾಗಿ ಮಧ್ಯಪ್ರವೇಶಿಸಬೇಕು”-ರೆಡ್ ಕ್ರೆಸೆಂಟ್ ಆಗ್ರಹಿಸಿದೆ.

ಕೆಲವು ದಿನಗಳ ಹಿಂದೆ, ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 500ಕ್ಕೂ ಮಿಕ್ಕ ಜನರು ಮೃತಪಟ್ಟಿದ್ದಾರೆ. ಆದರೆ, ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಜಿಹಾದ್‌ನ ರಾಕೆಟ್‌ಗಳು ದಿಕ್ಚ್ಯುತಿಗೊಂಡು ಆಸ್ಪತ್ರೆಯನ್ನು ಹೊಡೆದವು ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ,ಇದನ್ನು ಸಾಬೀತುಪಡಿಸಲು ಪುರಾವೆಯನ್ನು ಪ್ರಸ್ತುತಪಡಿಸಲು ಅವರಿಗೆ ಸಾಧ್ಯವಾಗಿಲ್ಲ.

error: Content is protected !! Not allowed copy content from janadhvani.com