KCF ಮತ್ತು ಹಲವಾರು ದೀನಿ ಸ್ಥಾಪನೆಗಳಿಗೆ ಸಹಾಯ ಸಹಕಾರ ನೀಡುತ್ತಿರುವ ಬುರೈದದ ಯುವ ಉದ್ಯಮಿ ಸಮಾಜ ಸೇವಕ ಮುಹಮ್ಮದ್ ಸಾದಿಕ್ ಕಾಟಿಪಳ್ಳ ಅವರನ್ನು KCF ಅಲ್ ಕಸೀಮ್ ಝೋನ್ ವತಿಯಿಂದ ಬುರೈದ ಸೆಕ್ಟರ್ ನಡೆಸಿದ ರಬೀಹ್ -23 ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಇಹ್ಸಾನ್ ಕರ್ನಾಟಕ ಇದರ ಮರ್ಜಾನ್ ಹಟ್ ಮದರಸ ಯೋಜನೆಗೆ ಒಂದು ಸಂಪೂರ್ಣ ಮದರಸ ತನ್ನ ಮರಣ ಹೊಂದಿದ ತಂದೆಯ ಹೆಸರಿನಲ್ಲಿ ಕೊಡುಗೆ ನೀಡಿದ್ದನ್ನು ಹಾಗು ಹಲವಾರು ಸಹಾಯ ಸಹಕಾರಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ವೇದಿಕೆಯಲ್ಲಿ KCF ಸೌದಿ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ, ಸಂಘಟನಾ ಇಲಾಖೆ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಇಹ್ಸಾನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಣ್ಣಂಗಾರ್ , ಶಿಕ್ಷಣ ಇಲಾಖೆ ಕಾರ್ಯದರ್ಶಿ ಯಾಕೂಬ್ ಸಖಾಫಿ , ಝೋನ್ ಕಾರ್ಯದರ್ಶಿ ಬಷೀರ್ ಕನ್ಯಾನ, ಕೋಶಾಧಿಕಾರಿ ಇರ್ಷಾದ್ ಸಚ್ಚರಿಪೇಟೆ , ಬುರೈದ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ, ಕಾರ್ಯದರ್ಶಿ ಬಶೀರ್ ಬನ್ನೂರ್ , ಖಯ್ಯುಮ್ ಜಾಲ್ಸೂರ್,
RSC ನ್ಯಾಷನಲ್ ಫೈನಾನ್ಸ್ ಕಂಟ್ರೋಲರ್ ಡಾ. ನವಾಝ್ ಹಸನಿ ಹಾಜರಿದ್ದರು.