janadhvani

Kannada Online News Paper

ಫಲಸ್ತೀನ್ ಸಂಘರ್ಷ: ಇಂಡಿಯನ್ ಗ್ರ್ಯಾಂಡ್ ಮುಫ್ತಿ- ಫಲಸ್ತೀನ್ ಮುಫ್ತಿ ಮಾತುಕತೆ

ಪ್ಯಾಲೆಸ್ತೀನರು ತಮ್ಮ ನಾಡು ಮತ್ತು ಈ ನೆಲವನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ ಶೈಖ್ ಮುಹಮ್ಮದ್ ಹುಸೈನ್ ಭಾರತೀಯ ಜನರ ಬೆಂಬಲ ಮತ್ತು ಪ್ರಾರ್ಥನೆಗಾಗಿ ಮನವಿ ಮಾಡಿದರು.

ಕೋಝಿಕ್ಕೋಡ್ | ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲಿ ಆಕ್ರಮಣಗಳು ಮತ್ತು ದಾಳಿಗಳು ಹೆಚ್ಚುತ್ತಿರುವ ಮಧ್ಯೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಪ್ಯಾಲೇಸ್ಟಿನಿಯನ್ ಮುಫ್ತಿ ಮತ್ತು ವಿದ್ವಾಂಸ ಶೈಖ್ ಮುಹಮ್ಮದ್ ಹುಸೈನ್ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರಸ್ತುತ ಯುದ್ಧದ ಪರಿಸ್ಥಿತಿ ಮತ್ತು ಪ್ಯಾಲೇಸ್ಟಿನಿಯನ್ನರ ಆತಂಕದ ವಾತಾವರಣ ಬಗ್ಗೆ ವಿಚಾರಿಸಿದ ಗ್ರ್ಯಾಂಡ್ ಮುಫ್ತಿ, ಭಾರತೀಯ ಜನತೆಯ ಹೃತ್ಪೂರ್ವಕ ಕಾಳಜಿ, ಬೆಂಬಲ ಮತ್ತು ಪ್ರಾರ್ಥನೆಗಳನ್ನು ತಿಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಯಾಲೆಸ್ಟೀನಿಯನ್ನರ ಸಂಕಟ ಮತ್ತು ಅವರ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಅರ್ಥಮಾಡಿಕೊಂಡ ಭಾರತ, ಅದೇ ನಿಲುವಿನೊಂದಿಗೆ ಮುಂದುವರಿಯತ್ತಿದೆ ಎಂಬುದನ್ನು ಖಚಿತಪಡಿಸುವ ಕ್ರಮಗಳನ್ನು ನಿರೀಕ್ಷಿಸುತ್ತಿರುವುದಾಗಿ ಶೈಖ್ ಮುಹಮ್ಮದ್ ಹುಸೈನ್ ಅವರು ಗ್ರ್ಯಾಂಡ್ ಮುಫ್ತಿಯೊಂದಿಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಶ್ವದ ಪ್ರಮುಖ ಶಕ್ತಿಶಾಲಿ ರಾಷ್ಟ್ರಗಳಲಿ ಒಂದಾಗಿ ಬೆಳೆಯುತ್ತಿರುವ ಭಾರತವು ಪ್ರಸ್ತುತ ಪಶ್ಚಿಮ ಏಷ್ಯಾದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ರಾಜತಾಂತ್ರಿಕ ಪಾತ್ರವನ್ನು ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಭಾರತ ಸರ್ಕಾರದ ಕ್ರಮಗಳಿಗೆ ಗ್ರ್ಯಾಂಡ್ ಮುಫ್ತಿ ಮಧ್ಯಸ್ಥಿಕೆ ವಹಿಸಬೇಕೆಂದೂ ಶೈಖ್ ಹುಸೈನ್ ಮನವಿ ಮಾಡಿದರು.

ಪ್ಯಾಲೆಸ್ತೀನರು ತಮ್ಮ ನಾಡು ಮತ್ತು ಈ ನೆಲವನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ ಶೈಖ್ ಮುಹಮ್ಮದ್ ಹುಸೈನ್ ಭಾರತೀಯ ಜನರ ಬೆಂಬಲ ಮತ್ತು ಪ್ರಾರ್ಥನೆಗಾಗಿ ಮನವಿ ಮಾಡಿದರು.

ಅಖಿಲ ಭಾರತ ಜಮ್ಇಯ್ಯತುಲ್ ಉಲಮಾದ ಆಶ್ರಯದಲ್ಲಿ ನಡೆದ ಪ್ರಾರ್ಥನಾ ಸಭೆಗಳು ಮತ್ತು ಒಗ್ಗಟ್ಟಿನ ರ್ಯಾಲಿಗಳ ಬಗ್ಗೆ ಗ್ರ್ಯಾಂಡ್ ಮುಫ್ತಿ ಗಮನ ಸೆಳೆದರು. ಭಾರತ ಸರ್ಕಾರದ ತ್ವರಿತ ಕ್ರಮಕ್ಕಾಗಿ ನಾವು ಸಕ್ರಿಯವಾಗಿ ಮಧ್ಯಪ್ರವೇಶಿಸುತ್ತೇವೆ ಮತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತೇವೆ ಎಂದು ಪ್ಯಾಲೆಸ್ತೀನ್ ಮುಫ್ತಿಗೆ ತಿಳಿಸಿದರು. ನಿನ್ನೆ ಮಧ್ಯಾಹ್ನ ದೂರವಾಣಿ ಸಂಭಾಷಣೆಯ ಮೂಲಕ ಇವರಿಬ್ಬರೂ ಮಾತುಕತೆ ನಡೆಸಿದರು.

error: Content is protected !! Not allowed copy content from janadhvani.com