janadhvani

Kannada Online News Paper

ತಾಜುಲ್ ಉಲಮಾ ಉರೂಸ್: ಅದ್ದೂರಿ ಚಾಲನೆ- ಅಕ್ಟೋಬರ್ 18ಕ್ಕೆ ಸಮಾರೋಪ

ಸಮಾರೋಪ ಸಮಾರಂಭದಲ್ಲಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

ಎಟ್ಟಿಕುಳಂ|ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಲ(ಖ. ಸಿ) ಅವರ 10ನೇ ಉರೂಸ್ ಸಮಾರಂಭಕ್ಕೆ ಅದ್ದೂರಿ ಚಾಲನೆ. ಇಂದು ಸಂಜೆ 4 ಗಂಟೆಗೆ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ತಾಜುಲ್ ಉಲಮಾ ಮಕ್ಬರಾ ಝಿಯಾರತ್ ನೊಂದಿಗೆ ಆರಂಭಿಸಿ, ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್ ಅಲ್ಬುಖಾರಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಮೂರು ದಿನಗಳ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ಕರ್ನಾಟಕದಿಂದ ಆಗಮಿಸಿದ ಸಂದಲ್ ಮೆರವಣಿಗೆಯನ್ನು ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.

ಸಂಜೆ 5ಕ್ಕೆ ಸ್ವಾಗತ ಸಂಘದ ಅಧ್ಯಕ್ಷ ಪಟ್ಟುವಂ ಕೆ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಹಜ್ ಸಮಿತಿ ಅಧ್ಯಕ್ಷ ಸಿ.ಮುಹಮ್ಮದ್ ಫೈಝಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದರು. ಸಯ್ಯಿದ್ ಇಬ್ರಾಹಿಂ ಪೂಕ್ಕುಞ್ಞಿ ತಂಙಳ್ ಕಲ್ಲಕಟ್ಟ ದುಆ ನೆರವೇರಿಸಿದರು. ವಿಪಿಎಂ ಫೈಝಿ ವಿಲ್ಯಾಪಳ್ಳಿ, ಮುಹಮ್ಮದಲಿ ಸಖಾಫಿ ತೃಕರಿಪುರ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ವಿ.ಎಚ್.ಅಲಿ ದಾರಿಮಿ ಎರ್ನಾಕುಲಂ, ಪ್ರೊಫೆಸರ್ ಯು.ಸಿ.ಅಬ್ದುಲ್ ಮಜೀದ್ ಮೊದಲಾದವರು ಮಾತನಾಡಿದರು. ಅಬ್ದುಲ್ ರಶೀದ್ ನರೀಕೋಡ್ ಸ್ವಾಗತಿಸಿ, ಎಸ್ಪಿ ನಾಸಿಂ ಹಾಜಿ ಪೆರುಂಬ ಧನ್ಯವಾದ ಸಲ್ಲಿಸಿದರು.

ಸಂಜೆ 7 ಗಂಟೆಗೆ ಪಿ.ಕೆ.ಆಲಿಕುಂಞಿ ದಾರಿಮಿ ಅಧ್ಯಕ್ಷತೆಯಲ್ಲಿ ಬಿ.ಎಸ್.ಅಬ್ದುಲ್ಲಕುಂಞಿ ಫೈಝಿ ನೂರೆ ಮದೀನಾ ಉದ್ಘಾಟಿಸಿದರು. ಡಾ. ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಉಪನ್ಯಾಸ ನೀಡಿದರು.

ನಾಳೆ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಮಂಖೂಸ್ ಮೌಲಿದ್ ಮಜ್ಲಿಸ್ ಗೆ ಸಅದುಲ್ ಅಮೀನ್ ಅಹ್ಸನಿ ಅಲ್ ಕಾಮಿಲಿ ಹಾಗೂ ಸಯ್ಯಿದ್ ಮುಸ್ಅಬ್ ಅಲ್ ಬುಖಾರಿ ಎಟ್ಟಿಕುಳಂ ನೇತೃತ್ವ ವಹಿಸಲಿದ್ದಾರೆ. ಸಯ್ಯಿದ್ ಜುನೈದ್ ಅಲ್ ಬುಖಾರಿ ದುಆ ನಡೆಸುವರು. ಬೆಳಿಗ್ಗೆ 10 ಗಂಟೆಗೆ ಮಹ್ಲರತುಲ್ ಬದ್ರಿಯ್ಯ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ಅಲ್ ಅಝ್ಹರಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಿದ್ದಾರೆ. ಕೆ.ಎಂ ಅಬ್ದುಲ್ಲಕುಟ್ಟಿ ಬಾಖವಿ ನೇತೃತ್ವ ವಹಿಸಲಿದ್ದಾರೆ. ಅನಸ್ ಅಮಾನಿ ಪುಷ್ಪಗಿರಿ ಅವರು ಉಪನ್ಯಾಸ ನೀಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಶಾದುಲಿ ರಾತೀಬ್ ಸಯ್ಯಿದ್ ಅಬ್ದುಲ್ ರಹಮಾನ್ ಶಹೀರ್ ಅಲ್ ಬುಖಾರಿ ಪೊಸೋಟ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದೆ. ಸಯ್ಯಿದ್ ಆಟ್ಟಕೋಯ ತಂಙಳ್ ಅಡಿಪ್ಪಾಲಂ ನೇತೃತ್ವ ವಹಿಸಲಿದ್ದಾರೆ. ಮುಹಮ್ಮದ್ ರಫೀಕ್ ಸಅದಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಜಲಾಲಿಯಾ ರಾತೀಬ್ ಮಜ್ಲಿಸ್ ನ ಅಧ್ಯಕ್ಷತೆಯನ್ನು ವಿ.ಪಿ ಅಬ್ದುಲ್ ಹಕೀಂ ಸಅದಿ ವಹಿಸಲಿದ್ದಾರೆ. ಮುಹಮ್ಮದ್ ಸ್ವಾಲಿಹ್ ಸಅದಿ ನೇತೃತ್ವ ವಹಿಸಲಿದ್ದಾರೆ. ಅಬ್ದುಲ್ ರಶೀದ್ ದಾರಿಮಿ ನೂತ್ತೇರಿ ಉಪನ್ಯಾಸ ನೀಡಲಿದ್ದಾರೆ.

ಸಂಜೆ 7ಕ್ಕೆ ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಅವರ ಪ್ರಾರ್ಥನೆಯೊಂದಿಗೆ ತಿದ್ಕಾರೇ ಜಿಲಾನಿ ಸಂಗಮಕ್ಕೆ ಚಾಲನೆ ನೀಡಲಿದ್ದಾರೆ. ಪೆರುಂಬಾ ಯೂಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಎಂ..ಕೆ.ದಾರಿಮಿ ಉದ್ಘಾಟಿಸಲಿದ್ದಾರೆ. ಕೂಟಂಪಾರ ಅಬ್ದುಲ್ ರಹ್ಮಾನ್ ದಾರಿಮಿ ಉಪನ್ಯಾಸ ನೀಡಲಿದ್ದಾರೆ.

ಅಕ್ಟೋಬರ್ 18 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಮದನಿ ಸಂಗಮವು ಸಯ್ಯಿದ್ ಅಶ್ರಫ್ ತಂಙಳ್ ಮದನಿ ಆದೂರು ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದೆ. ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಙಳ್ ಮದನಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ಉದ್ಘಾಟಿಸಲಿದ್ದಾರೆ.ಕೂಟಂಪಾರ ಅಬ್ದುಲ್ ರಹ್ಮಾನ್ ದಾರಿಮಿ, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಬಶೀರ್ ಮದನಿ ನೀಲಗಿರಿ, ಹುಸೈನ್ ಸಖಾಫಿ ಕೂಳೂರು ಬೋಧನೆ ನೀಡುವರು.

12 ಗಂಟೆಗೆ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್ ಗೆ ಸಯ್ಯಿದ್ ತ್ವಯ್ಯಿಬುಲ್ ಬುಖಾರಿ ಮಾಟೂಲ್ ನೇತೃತ್ವ ವಹಿಸುವರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ ದುಆ ನಡೆಸುವರು. ಪಿ.ಪಿ.ಮುಹಮ್ಮದ್ ಕುಂಞ್ಞು ಮೌಲವಿ ಓಣಪರಂಬ್ ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ.

ಎರಡು ಗಂಟೆಗೆ ರಿಫಾಯಿ ರಾತೀಬ್,ಡಾ. ಕೋಯ ಕಾಪ್ಪಾಡ್ ನೇತೃತ್ವ ವಹಿಸಲಿದ್ದಾರೆ. ಬಾದುಶಾ ಸಖಾಫಿ ಆಲಪ್ಪುಝ ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯಿದ್ ಪಿ.ಎಸ್.ಅಟ್ಟಕೋಯ ತಂಙಳ್ ಬಾಹಸನ್ ದುಆ ನೆರವೇರಿಸುವರು. 4 ಗಂಟೆಗೆ ಖಸೀದತುಲ್ ಬುರ್ದಾ, ಅಬ್ದುಲ್ ಸಮದ್ ಅಮಾನಿ ಪಟ್ಟುವಂ ನೇತೃತ್ವ ವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸುವರು. ಡಾ. ಅಬ್ದುಲ್ ಹಕೀಂ ಅಝ್ಹರಿ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಝಮೀರ್ ಅಹ್ಮದ್, ರಹೀಮ್ ಖಾನ್, ಸಲೀಂ ಅಹ್ಮದ್, ಸಂಸದ ರಾಜಮೋಹನ್ ಉನ್ನತನ್, ಸಂಸದ ಡಾ. ಸಯ್ಯಿದ್ ನಾಸರ್ ಹುಸೈನ್, ಶಾಸಕರಾದ ಮದುಸೂದನನ್, ಕಡನಪಲ್ಲಿ ರಾಮಚಂದ್ರನ್, ವಿಜಿನ್ ಕರ್ನಾಟಕ ಶಾಸಕ ಅಶೋಕ್ ಕುಮಾರ್ ರೈ, ಶಾಸಕ ಎನ್.ಎ.ಹಾರಿಸ್,ಕರ್ನಾಟಕ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ಯೇನಪೊಯ ಅಬ್ದುಲ್ಲಕುಂಞಿ ಹಾಜಿ ಮತ್ತಿತರರು ಮಾತನಾಡಲಿದ್ದಾರೆ.

ಅಕ್ಟೋಬರ್.18 ರಂದು ಸಂಜೆ 7 ಗಂಟೆಗೆ ಸಮಾರೋಪ ಪ್ರಾರ್ಥನಾ ಸಭೆ ನಡೆಯಲಿದೆ. ಸಯ್ಯಿದ್ ಕೆ.ಎಸ್.ಅಟ್ಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಲಿ ಬಾಫಕಿ ತಂಙಳ್ ದುಆ ನಡೆಸುವರು. ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಯ್ಯಿದ್ ಇಬ್ರಾಹೀಮುಲ್ ಖಖೀಲ್ ಅಲ್ ಬುಖಾರಿ, ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಕೋಟೂರು ಕುಂಞಾಮು ಮಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮತ್ತು ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಪನ್ಯಾಸ ನೀಡಲಿದ್ದಾರೆ.

ಸಯ್ಯಿದ್ ಹಾಮೀದ್ ಇಂಬಿಚಿಕೋಯ ತಂಙಳ್ ಅಲ್ಬುಖಾರಿ, ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರಂ, ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಕೆ.ಪಿ.ಅಬೂಬಕರ್ ಮುಸ್ಲಿಯಾರ್ ಪಟ್ಟುವಂ ಸಯ್ಯಿದ್ ತ್ವಾಹಾ ತಂಙಳ್ ಸಖಾಫಿ ಕುಟ್ಯಾಡಿ, ಸಯ್ಯಿದ್ ಮುಹಮ್ಮದ್ ಬಾಕೀರ್ ಶಿಹಾಬ್ ತಂಙಳ್ ಕೋಟ್ಟಕ್ಕಲ್ , ಸಯ್ಯಿದ್ ಮುಹಮ್ಮದ್ ಶಾಫಿಈ ಬಾಅಲವಿ ವಳಪಟ್ಟಣಂ, ಕಲ್ತರ ಅಬ್ದುಲ್ ಖಾದರ್ ಮದನಿ, ಡಾ.ಅಬ್ದುಲ್ ರಶೀದ್ ಝೈನಿ, ಫಿರ್ದೌಸ್ ಸಖಾಫಿ, ಕೂಟ್ಟೂರು ಅಬ್ದುಲ್ ರಹ್ಮಾನ್ ಹಾಜಿ, ಮುಮ್ತಾಝ್ ಅಲಿ ಮಂಗಳೂರು, ಮನ್ಸೂರ್ ಹಾಜಿ ಚೆನ್ನೈ, ಇವಿ ಅಬ್ದುಲ್ ರಹಮಾನ್ ಹಾಜಿ, ಸಿದ್ದೀಕ್ ಸಖಾಫಿ ನೇಮಮ್, ಕರೀಂ ಹಾಜಿ ಕೈದಪಾಡಂ, ನಾಸರ್ ಹಾಜಿ ಓಮಚಪ್ಪುಝ, ಬಾಪು ಹಾಜಿ ಕತರಮ್ಮಲ್, ರಿಯಾಝ್ ಮಣಕ್ಕಾಡನ್, ಮುಹಮ್ಮದಲಿ ಹಾಜಿ ಸ್ಟಾರ್ ಓಫ್ ಏಸಿಯಾ ಮೊದಲಾದವರು ಭಾಗವಹಿಸಲಿದ್ದಾರೆ.

ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿ, ಸಿರಾಜ್ ಇರುವೇರಿ ಧನ್ಯವಾದ ಸಲ್ಲಿಸುವರು.

error: Content is protected !! Not allowed copy content from janadhvani.com