ನಾರಂಕೋಡಿ: ಇಲ್ಲಿನ ತಾಜುಲ್ ಉಲಮಾ ಮದ್ರಸ ವತಿಯಿಂದ ಮೌಲಿದ್ ಮಜ್ಲಿಸ್ ಹಾಗೂ ವಿದ್ಯಾರ್ಥಿಗಳ ಮೀಲಾದ್ ಜಲ್ಸಾ, ಬುರ್ದಾ ಮಜ್ಲಿಸ್ ಹಾಗೂ ದಾರುಲ್ ಅಶ್ ಅರಿಯ್ಯ ಸಿಲ್ವರ್ ಜುಬಿಲಿಯ ಪ್ರಚಾರ ಸಂಗಮವು ಅಕ್ಟೋಬರ್ 15 (ನಾಳೆ) ಸಂಜೆ ನಡೆಯಲಿದೆ
ಕಾರ್ಯಕ್ರಮವು ಅಬ್ದುಲ್ಲಾ ನಾರಂಕೋಡಿಯವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಮದ್ರಸ ವಠಾರ ನಾರಂಕೋಡಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿಯಾಬುದ್ದೀನ್ ತಂಙಳ್ ಮದಕ, ದಾರುಲ್ ಅಶ್ಅರಿಯ್ಯ ಸಂಸ್ಥೆಯ ಮೆನೇಜರ್ ಸಿ.ಹೆಚ್ ಮಹಮ್ಮದ್ ಅಲಿ ಸಖಾಫಿ ಹಾಗೂ ಇನ್ನಿತರ ಉಲಮಾ , ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಇಬ್ರಾಹೀಂ ಕರೀಂ ಕದ್ಕಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.