janadhvani

Kannada Online News Paper

ಇಸ್ರೇಲ್-ಹಮಾಸ್ ಸಂಘರ್ಷ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೀಡಿಯೋಗಳು ವ್ಯಾಪಕ

" ಭಯಪಡಬೇಡಿ, ನಾನು ಮುಸ್ಲಿಂ ಮತ್ತು ನಾವು ಯಾರಿಗೂ ನೋಯಿಸುವುದಿಲ್ಲ"

ಟೆಲ್ ಅವೀವ್: ಇಸ್ರೇಲ್-ಹಮಾಸ್ ಸಂಘರ್ಷ ಉಲ್ಬಣಗೊಳ್ಳುತ್ತಲೇ ಇದ್ದು, ದಾಳಿಗೆ ಸಂಬಂಧಿಸಿದ ನೂರಾರು ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕಳೆದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ X ಮತ್ತು YouTube ನಂತಹ ಸಾಮಾಜಿಕ ಮಾಧ್ಯಮಗಳು ನಕಲಿ ವೀಡಿಯೊಗಳು, ಫೋಟೋಗಳು ಮತ್ತು ನಕಲಿ ಸುದ್ದಿಗಳಿಂದ ತುಂಬಿದೆ.

ಇಸ್ರೇಲ್‌ಗೆ ಸಹಾಯ ಮಾಡಲು ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಯುಎಸ್ ಕಳುಹಿಸುತ್ತಿದೆ ಎಂದು X ನಲ್ಲಿನ ಬಳಕೆದಾರರು ವೈಟ್ ಹೌಸ್‌ನಿಂದ ನಕಲಿ ಸುದ್ದಿ ಬಿಡುಗಡೆಯನ್ನು ಹಂಚಿಕೊಂಡಿದ್ದಾರೆ, ಆದರೆ ಅಧ್ಯಕ್ಷ ಜೋ ಬಿಡೆನ್ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಶ್ವೇತಭವನ ಸೋಮವಾರ ದೃಢಪಡಿಸಿದೆ.

“ಹಮಾಸ್ ಮಕ್ಕಳನ್ನು ಹತ್ಯೆ ಮಾಡಿದರು ಎಂದು ಇಸ್ರೇಲಿಗಳು ಹೇಗೆ ನಕಲಿ ವೀಡಿಯೊಗಳನ್ನು ಮಾಡುತ್ತಾರೆ ಎಂಬುದನ್ನು ನೋಡಿ” ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ನಲ್ಲಿ ಮತ್ತೊಂದು ವಿಡಿಯೋ ಹರಿದಾಡುತ್ತಿದೆ. ಗಾಯಗೊಂಡ ಮಗು ನೆಲದ ಮೇಲೆ ಮಲಗಿರುತ್ತದೆ ಮತ್ತು ಕೆಲವು ಪುರುಷರು ಮಗುವಿಗೆ ಅಳುವಂತೆ ತಿಳಿಸುತ್ತಾರೆ. ಒಬ್ಬ ವ್ಯಕ್ತಿ ಸ್ವಯಂಚಾಲಿತ ರೈಫಲ್ ಹಿಡಿದಿರುವುದು ಕಂಡುಬಂದಿದೆ.ಪ್ರೊಫಶನಲ್ ಕ್ಯಾಮೆರಾ ಉಪಕರಣಗಳನ್ನು ಬಳಸಿ ಇದನ್ನು ಚಿತ್ರೀಕರಿಸಲಾಗಿದೆ. ಸೆರೆಯಲ್ಲಿರುವ ಪ್ಯಾಲೆಸ್ಟೀನಿಯನ್ ಅಹ್ಮದ್ ಮನಸ್ ರ ಕಥೆಯನ್ನು ಆಧರಿಸಿದ “ಎಂಪ್ಟೀ ಪ್ಲೇಸ್” ಎಂಬ ಪ್ಯಾಲೇಸ್ಟಿನಿಯನ್ ಕಿರುಚಿತ್ರ ಚಿತ್ರೀಕರಣದ ದೃಶ್ಯಗಳು ಎಂದು ಈ ವಿಡಿಯೋವನ್ನು ಪರಿಶೀಲಿಸಿದ ನಂತರ ರಾಯಿಟರ್ಸ್ ಸ್ಪಷ್ಟಪಡಿಸಿದೆ.

ಏತನ್ಮಧ್ಯೆ, ಕಿಬ್ಬುತ್‌ನಲ್ಲಿ, ಹಮಾಸ್ ಹೋರಾಟಗಾರರು ಮನೆಗಳಿಗೆ ನುಗ್ಗಿ ಶಿಶುಗಳ ಶಿರಚ್ಛೇದ ಮಾಡಿದರು ಮತ್ತು ಇಡೀ ಕುಟುಂಬವನ್ನು ಬಂದೂಕಿನಿಂದ ಹತ್ಯೆಮಾಡಿದರು ಎಂಬ ವದಂತಿಯೂ ಹಬ್ಬಿತ್ತು. ಬಂದೂಕುಗಳು ಮತ್ತು ಗ್ರೆನೇಡ್‌ಗಳೊಂದಿಗೆ ಸುಮಾರು 70 ಹಮಾಸ್ ಹೋರಾಟಗಾರ ಉಗ್ರಗಾಮಿಗಳು ಕಿಬ್ಬುತ್‌ಗೆ ನುಗ್ಗಿದರು ಮತ್ತು 40 ಶಿಶುಗಳನ್ನು ಶಿರಚ್ಛೇದ ಮಾಡಿ ಕೊಲೆಗೈದರು ಎಂಬುದಾಗಿತ್ತು ವರದಿ. ಇದು ಇಸ್ರೇಲ್‌ನ ಸುಳ್ಳು ಸುದ್ದಿಗಳಾಗಿವೆ ಇಂತಹಾ ದೌರ್ಜನ್ಯಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಕೈ ನ್ಯೂಸ್ ಮುಖ್ಯ ವರದಿಗಾರ ವ್ಯಕ್ತಪಡಿಸಿದರು.

ಉದ್ವಿಗ್ನತೆಯ ನಡುವೆ ಇಸ್ರೇಲಿ ಮಹಿಳೆಯೊಬ್ಬರು ಸ್ಥಳೀಯ ಇಸ್ರೇಲಿ ಚಾನೆಲ್‌ಗೆ ನೀಡಿದ ಸಂದರ್ಶನವೂ ವೈರಲ್ ಆಗುತ್ತಿದೆ. ಹಮಾಸ್ ಹೋರಾಟಗಾರರು ತಮ್ಮ ಮನೆಗೆ ಪ್ರವೇಶಿಸಿದ ಅನುಭವವನ್ನು ಅವರು ವಿವರಿಸಿದ್ದಾರೆ.
ಅವರು ನಮ್ಮ ಬಳಿಗೆ ಬಂದರು, ನಾನು ಮತ್ತು ನನ್ನ ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದೆವು. ಅವರು ಎಲ್ಲಾ ಕಡೆ ಕಣ್ಣಾಯಿಸಿದರು. ಅವರಲ್ಲಿ ಒಬ್ಬರು ನನಗೆ ಇಂಗ್ಲಿಷ್‌ನಲ್ಲಿ ಹೇಳಿದರು.” ಭಯಪಡಬೇಡಿ, ನಾನು ಮುಸ್ಲಿಂ ಮತ್ತು ನಾವು ಯಾರಿಗೂ ನೋಯಿಸುವುದಿಲ್ಲ” ವಾಸ್ತವವಾಗಿ ನನಗೆ ಅಚ್ಚರಿ ಮೂಡಿಸಿತು.ಅಷ್ಟರಲ್ಲೇ ಒತ್ತಡವೂ ಇತ್ತು. ನಾನು ನನ್ನ ಮಕ್ಕಳೊಂದಿಗೆ ಅಲ್ಲೇ ಕುಳಿತೆ.

ಡೈನಿಂಗ್ ರೂಮಿನಿಂದ ಒಬ್ಬ ವ್ಯಕ್ತಿ ಬಂದು ನಮ್ಮ ಪಕ್ಕದಲ್ಲಿ ಕುಳಿತನು. ಇನ್ನು ಕೆಲವರು ಮನೆಯ ಸುತ್ತ ಗಸ್ತು ತಿರುಗುತ್ತಿದ್ದರು. ಮೇಜಿನ ಮೇಲೆ ಇಟ್ಟಿದ್ದ ಬಾಳೆಹಣ್ಣನ್ನು ನೋಡಿ ತಿನ್ನಬಹುದೇ ಎಂದು ಕೇಳಿದರು, ನಾನು ಒಪ್ಪಿದೆ. ಹಿರಿಮಗನಿಗೆ ನಿಜವಾಗಿಯೂ ಭಯವಾಗಿತ್ತು, ಆದರೆ ಕಿರಿಯವನಿಗೆ ಯಾವುದೇ ಭಯವಿರಲಿಲ್ಲ. ಅವರು ಎರಡು ಗಂಟೆಗಳ ಕಾಲ ಮನೆಯಲ್ಲಿಯೇ ಇದ್ದರು. ಬಳಿಕ ಬಾಗಿಲು ಮುಚ್ಚಿ ಸ್ಥಳದಿಂದ ತೆರಳಿದರು ಎಂದು ತಮ್ಮ ಅನುಭವವನ್ನು ಹಂಚಿದ್ದಾರೆ.

error: Content is protected !! Not allowed copy content from janadhvani.com