janadhvani

Kannada Online News Paper

ಸೌದಿ: ತಾಂಜೇನಿಯಾದ ಅವಳಿ ಮಕ್ಕಳ ಬೇರ್ಪಡಿಸುವಿಕೆ -16 ಗಂಟೆಗಳ ಸುದೀರ್ಘ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿ

ಶಸ್ತ್ರಚಿಕಿತ್ಸೆಯ ಹನ್ನೆರಡು ಗಂಟೆಗಳ ನಂತರ, ಹಸನ್ ಮತ್ತು ಹುಸೈನ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಹಾಸಿಗೆಯಲ್ಲಿ ಮಲಗಿದರು.

ರಿಯಾದ್: ತಾಂಜೇನಿಯಾದ ಅವಳಿ ಮಕ್ಕಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ರಿಯಾದ್‌ನಲ್ಲಿ ಯಶಸ್ವಿಯಾಗಿದೆ. ಎರಡು ವರ್ಷದ ಹಸನ್ ಮತ್ತು ಹುಸೈನ್ ಅವರನ್ನು 16 ಗಂಟೆಗಳ ಸುದೀರ್ಘ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಯಶಸ್ವಿಯಾಗಿ ಬೇರ್ಪಡಿಸಲಾಯಿತು. ರಿಯಾದ್‌ನ ಕಿಂಗ್ ಅಬ್ದುಲ್ ಅಝೀಝ್ ಮೆಡಿಕಲ್ ಸಿಟಿ ಅಧೀನದ ಮಕ್ಕಳ ಕಿಂಗ್ ಅಬ್ದುಲ್ಲಾಹ್ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಪ್ರಾರಂಭವಾಯಿತು.

ಡಾ. ಅಬ್ದುಲ್ಲಾ ಅಲ್ ರಬಿಯಾ ಅವರ ನೇತೃತ್ವದಲ್ಲಿ ಅರಿವಳಿಕೆ, ಮಕ್ಕಳ ಶಸ್ತ್ರಚಿಕಿತ್ಸೆ, ಮಕ್ಕಳ ಮೂತ್ರಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ ಮತ್ತು ಮೂಳೆಚಿಕಿತ್ಸೆ ವಿಭಾಗಗಳ 35 ಸಲಹೆಗಾರರು, ತಜ್ಞರು, ನರ್ಸಿಂಗ್ ಮತ್ತು ತಾಂತ್ರಿಕ ಸಿಬ್ಬಂದಿಗಳು ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದರು. ನಿಖರವಾದ ಶಸ್ತ್ರಚಿಕಿತ್ಸೆ ಒಂಬತ್ತು ಹಂತಗಳಲ್ಲಿ ಪೂರ್ಣಗೊಂಡಿತು ಎಂದು ಡಾ. ಅಬ್ದುಲ್ಲಾ ಅಲ್-ರಬಿಯಾ ಹೇಳಿದರು.

ಶಸ್ತ್ರಚಿಕಿತ್ಸೆಯ ಹನ್ನೆರಡು ಗಂಟೆಗಳ ನಂತರ, ಹಸನ್ ಮತ್ತು ಹುಸೈನ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಹಾಸಿಗೆಯಲ್ಲಿ ಮಲಗಿದರು. ನಾಲ್ಕು ಗಂಟೆಗಳ ನಂತರ, ಕತ್ತರಿಸಿದ ಅಂಗಗಳನ್ನು ಪುನಃಸ್ಥಾಪಿಸಲಾಯಿತು. ಪ್ರತಿ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ, ಕೊಲೊನ್, ಮೂತ್ರ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಪುನಃಸ್ಥಾಪಿಸಲಾಯಿತು. ನಂತರ ಗಾಯಗಳಿಗೆ ಹೊಲಿಗೆ ಹಾಕಲಾಯಿತು. ಎರಡು ದೇಹಗಳಾಗಿ ಮಾರ್ಪಟ್ಟ ಹಸನ್ ಮತ್ತು ಹುಸೈನ್ ಅವರನ್ನು ಎರಡು ವಿಭಿನ್ನ ಹಾಸಿಗೆಗಳಲ್ಲಿ ಮಕ್ಕಳ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು ಎಂದು ಡಾ.ಅಲ್-ರಬಿಯಾ ಹೇಳಿದರು

error: Content is protected !! Not allowed copy content from janadhvani.com