janadhvani

Kannada Online News Paper

ದಾರುನ್ನಜಾತ್ ಎಜುಕೇಶನಲ್ ಸೆಂಟರ್- ಮಿಲಾದ್ ಆಚರಣೆ ಮತ್ತು ಆಕರ್ಷಕ ಕಾಲ್ನಡಿಗೆ ಜಾಥಾ

ಬೃಹತ್ ಮೌಲಿದ್ ಮಜ್ಲಿಸ್ ಸಯ್ಯದ್ ಶಮೀಮ್ ತಂಙಳ್ ಅಲ್ ಬುಖಾರಿ ಇವರ ನೇತತ್ವದಲ್ಲಿ ನಡೆಯಿತು

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪುನಗರ ಕೊಡಂಗಾಯಿ ಸಂಸ್ಥೆಯಲ್ಲಿ ಪ್ರವಾದಿ (ಸ ಅ)ರ1498 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಮಿಲಾದ್ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಗೆ ದ್ವಜಾರೋಹಣ ನಂತರ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದರ ಮಕ್ಬರ ಝಿಯಾರತಿನೊಂದಿಗೆ ಮಿಲಾದ್ ರ್ಯಾಲಿ ಟಿಪ್ಪು ನಗರದ ಬೀದಿ ಬೀದಿಗಳಲ್ಲಿ ದಪ್ಪು ಕಲಾ ಕಾರ್ಯಕ್ರಮದೊಂದಿಗೆ ಆಕರ್ಷಕ ಕಾಲ್ನಡಿಗೆ ಜಾತ ಸಂಜೆ ಅಸರ್ ನಮಾಜಿನ ಬಳಿಕ ಬೃಹತ್ ಮೌಲಿದ್ ಮಜ್ಲಿಸ್ ಸಯ್ಯದ್ ಶಮೀಮ್ ತಂಙಳ್ ಅಲ್ ಬುಖಾರಿ ಇವರ ನೇತತ್ವದಲ್ಲಿ ದಾರುನ್ನಜಾತ್ ಸಂಸ್ಥೆಯಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಫೈಝಿ, ಯುನುಸ್ ಸಹದಿ,ಮುಸ್ತಫಾ ಝುಹ್ರಿ, ರಝಾಕ್ ಸಹದಿ, ಹಾಫಿಳ್ ಶೆರೀಫ್ ಮುಸ್ಲಿಯಾರ್, ಡಾ/ಹಸೈನಾರ್ ಟಿಪ್ಪು ನಗರ,ಶಾಫಿ ಇಂಜಿನಿಯರ್ ಟಿಪ್ಪು ನಗರ,ಉಸ್ಮಾನ್ ಹಾಜಿ,ಅಬ್ಬಾಸ್, ಕಾರ್ಯಕ್ರಮದಲ್ಲಿ ಸಿಹಿ ತಿಂಡಿ ಹಾಗೂ ಕೊನೆಯಲ್ಲಿ ತಬರ್ರುಕ್ ನೀಡಲಾಯಿತು ಸಂಸ್ಥೆಯ
ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !! Not allowed copy content from janadhvani.com