ಕಾರ್ಕಳ ಸೆ.28: ನೂರುಲ್ ಹುದಾ ಜುಮಾ ಮಸೀದಿ ಮದ್ರಸ ಬಜಗೋಳಿ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಆಚರಣೆಯನ್ನು ಮಸೀದಿ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ನೂರುಲ್ ಹುದಾ ಮಸೀದಿ ಇದರ ಅಧ್ಯಕ್ಷರಾದ ಪುತ್ತಾಕರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಜಮಾಅತ್ ಉಪಾಧ್ಯಕ್ಷರಾದ ನೆಲ್ಲಿಕಾರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಆ ಆಶೀರ್ವಾಚನ ನೀಡಿದರು.
ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದರ ಉಸ್ತುವಾರಿಯನ್ನು ಮಸೀದಿ ಖತೀಬರಾದ ಅಬ್ದುರ್ರಹ್ಮಾನ್ ಹುಮೈದಿ ವಹಿಸಿದರು. ನಂತರ ಮಾಸಿಕ ಸ್ವಲಾತ್ ಮಜ್ಲಿಸ್ ನಡೆಯಿತು. ವೇದಿಕೆ ಯಲ್ಲಿ SMA ಕಾರ್ಕಳ ರೀಜಿನಲ್ ಅಧ್ಯಕ್ಷರು & ಬಜಗೋಳಿ ಜಮಾತ್ ಮಾಜಿ ಅಧ್ಯಕ್ಷರು ಹಾಜಿ H ಸುಲೈಮಾನ್, ಸಮಿತಿ ಸದ್ಯಸ ಉಮರಬ್ಬ, ಉಸ್ಮಾನ್, ಸಯ್ಯದ್ ಭಾವಕ, ಕೋಶಾಧಿಕಾರಿ ಇಕ್ಬಾಲ್, ಕಾರ್ಯದರ್ಶಿ ಸುಲೈಮಾನ್ ದಿಡಿಂಬಿರಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸೈಫುಲ್ಲ ಸ್ವಾಗತಿಸಿ ವಂದಿಸಿದರು.
ಇದಕ್ಕೂ ಮೊದಲು ಅಸರ್ ನಮಾಜಿನ ನಂತರ ನಡೆದ ಮಿಲಾದ್ ಸಂದೇಶ ಜಾಥಾ ಬಜಗೋಳಿ ಪೇಟೆಯಾಗಿ ಸಾಗಿ ಬಂತು.
ವರದಿ- ಸ್ವಾದಿಕ್ ಬಜಗೋಳಿ