janadhvani

Kannada Online News Paper

ಕೆ.ಸಿ.ಎಫ್. ಖತ್ತರ್ ಜೀ-ಮೀಟ್ ಕಾರ್ಯಕ್ರಮದ ಪ್ರಯುಕ್ತ ಕ್ಯೂ-ಸಫರ್ ಭೇಟಿ

ದೋಹಾ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ 50ನೇ ವಾರ್ಷಿಕೋತ್ಸವದ ಅಂಗವಾಗಿ ಸಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆಸಲಿರುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥ ಭಾಗವಾಗಿ, ದಿನಾಂಕ 01-09-2023 ರಂದು ಕೆ.ಸಿ.ಎಫ್ ಖತ್ತರ್ ಹಮ್ಮಿಕೊಂಡ ಜೀ-ಮೀಟ್ ಸಮ್ಮಿಲನದ ಪ್ರಯುಕ್ತ ಆಗಸ್ಟ್‌ 23 ರಿಂದ 29ರ ವರೆಗೆ ಕ್ಯೂ-ಸಫರ್ ಸೆಕ್ಟರ್ ಭೇಟಿ ಹಮ್ಮಿಕೊಳ್ಳಲಾಗಿದೆ.

ಕ್ಯೂ-ಸಫರ್ ಪ್ರಥಮ ಸೆಕ್ಟರ್ ಭೆಟಿಯು ದಿನಾಂಕ 23-08-2023 ರಂದು ದೋಹಾದ ವಕ್ರ ಸೆಕ್ಟರ್ ನಲ್ಲಿ ನಡೆಯುವ ಮೂಲಕ ಚಾಲನೆಗೊಂಡಿತು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಹನೀಫ್ ಪಾತೂರು ರವರು ಕ್ಯೂ-ಸಫರ್ ಭೇಟಿಯನ್ನು ಉದ್ಘಾಟನೆಗೊಳಿಸಿದರು..

ಸ್ವಾಗತ ಸಮಿತಿ ಪಬ್ಲಿಕೇಶನ್ ವಿಭಾಗ ಕನ್ವೀನರ್ ಸತ್ತಾರ್ ಅಶ್ರಫಿ ಮಠ ಉಸ್ತಾದರ ನೇತೃತ್ವದಲ್ಲಿ ಸುಮಾರು ಏಳು ದಿನಗಳ ಕಾಲ‌ ನಡೆಯುವ ಕ್ಯೂ-ಸಫರ್ ಭೇಟಿಯು, ದಿನಾಂಕ 01-09-1023 ರಂದು ನಡೆಯುವ ಜೀ-ಮೀಟ್ ಕಾರ್ಯಕ್ರಮಕ್ಕೆ ಸ್ಫೂರ್ಥಿದಾಯಕವಾಗಲಿದೆ ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸಿದರು.

ಕ್ಯೂ-ಸಫರ್ ಭೇಟಿಯಲ್ಲಿ ರಾಷ್ಟ್ರೀಯ, ಝೋನ್ ಹಾಗೂ ಸೆಕ್ಟರ್ ನಾಯಕರು ಪಾಲ್ಗೊಳ್ಳುವದರ ಮೂಲಕ ಜೀ-ಮೀಟ್ ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲ್ಗೊಳ್ಳಬೇಕಾಗಿ ಕರೆನೀಡಲಾಗಿದೆ.

error: Content is protected !! Not allowed copy content from janadhvani.com