janadhvani

Kannada Online News Paper

ಡಿಕೆಯಸ್ಸಿ ಜುಬೈಲ್:ಅನಸ್ ಅಮಾನಿ ಉಸ್ತಾದರಿಂದ ‘Close your Eyes’ ತರಗತಿ

ಕ್ಲಾಸ್ ನ ಸ್ಟೇಟಸ್ Close your Eyes ಮುಖ್ಯ ವಿಷಯವಾದ ಹುಸ್ನುಲ್ ಖುಲುಖ್ (ಉತ್ತಮ ಸ್ವಭಾವ) ಮತ್ತು ತಖ್ವಾ (ಭಯ ಭಕ್ತಿ) ಯ ಬಗ್ಗೆ ವಿವರಿಸಿದರು.

ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಇದರ ಅಧೀನದ ಜುಬೈಲ್ ಯೂತ್ ವಿಂಗ್ ಆಶ್ರಯದಲ್ಲಿ ದಿನಾಂಕ 19, ಆಗಷ್ಟ್ 2023 ಶನಿವಾರ ಸಂಜೆ 9 ಗಂಟೆಗೆ ಸರಿಯಾಗಿ ಡಿಕೆಯಸ್ಸಿ ಜುಬೈಲ್ ಹಾಲ್ ನಲ್ಲಿ Motivation ತರಗತಿ ಶಿಬಿರ ನೆರವೇರಿತು.

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಕಾರ್ಯಾಧ್ಯಕ್ಷ ಉಸ್ತಾದ್ ಪಿ.ಎಚ್.ಇಸ್ಮಾಯೀಲ್ ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ಖಿರಾಅತ್ ಪಠಿಸಿದರು.

ತರಬೇತಿ ಶಿಬಿರದ ಮುಖ್ಯ ರೂವಾರಿ, ಚಿಂತಕ ಬಹುಮಾನ್ಯ ಅನಸ್ ಅಮಾನಿ ಉಸ್ತಾದ್ ಪುಷ್ಪಗಿರಿ M.A. ಯವರು ಯುವ ಸಭಿಕರ ಮನತಟ್ಟುವಂತೆ ತರಗತಿ ನಡೆಸಿಕೊಟ್ಟರು. ಕ್ಲಾಸ್ ನ ಸ್ಟೇಟಸ್ Close your Eyes ಮುಖ್ಯ ವಿಷಯವಾದ ಹುಸ್ನುಲ್ ಖುಲುಖ್ (ಉತ್ತಮ ಸ್ವಭಾವ) ಮತ್ತು ತಖ್ವಾ (ಭಯ ಭಕ್ತಿ) ಯ ಬಗ್ಗೆ ವಿವರಿಸಿದರು.

ಕ್ಲಾಸ್ ನ ಸಾರಾಂಶ:
ಕಣ್ಣುಗಳಿಂದ ಹರಾಮನ್ನು ಆಸ್ವದಿಸಿ ನಶ್ವರ ಜೀವನಕ್ಕೆ ಮನಸೋತು ಶಾಶ್ವತ ಜೀವನ ನಷ್ಟಪಡಿಸದಿರಿ ಎಂದು ಒತ್ತಿ ಹೇಳಿದರು.
ಕಣ್ಣಿಗೂ ಹೃದಯಕ್ಕೂ ಗಾಢವಾದ ಸಂಬಂಧವಿದೆ. ಕಣ್ಣುಗಳಿಂದ ಕಂಡದ್ದನ್ನು ಹೃದಯ ಹಾಗೂ ಮನಸ್ಸುಗಳು ನಮ್ಮನ್ನು ನೇರ ದಾರಿಗೂ, ಕೆಟ್ಟ ದಾರಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚು. ದುಷ್ಟ ಚಟಗಳಿಗೆ ಬೀಳದಂತೆ ಜಾಗೃತೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.
ಕುಟುಂಬದೊಂದಿಗೆ ಒಳ್ಳೆಯ ಸ್ವಭಾವದ ಭಾಂಧವ್ಯ ವಿರಿಸಿರಿ.

ಅಲ್ಲಾಹನಿಗೆ ಇಬಾದತ್ ನಿರ್ವಹಿಸುತ್ತಾ ಬೆಕ್ಕಿಗೆ ಆಹಾರ ಕೊಡದೇ ಕಟ್ಟಿಹಾಕಿ ಸಾಯಿಸಿದ ಮಹಿಳೆ ನರಕಕ್ಕೂ, ನಾಯಿಗೆ ನೀರು ಕೊಟ್ಟು ಬದುಕಿಸಿ ಸ್ವರ್ಗಕ್ಕೆ ಅರ್ಹರಾದ ವಿಷಯದ ಬಗ್ಗೆ ತಿಳಿಸಿದರು.
40 ವರ್ಷಗಳ ಕಾಲ ಅಝಾನ್ ನೀಡಿ ಮರಣದ ಸಮಯ ಈಮಾನ್ ಇಲ್ಲದೇ ಮರಣ ಹೊಂದಿದ ವ್ಯಕ್ತಿಯ ಚರಿತ್ರೆಯನ್ನು ವಿವರಿಸಿದ ಅವರು, ನಮ್ಮ ಮರಣದ ಸಮಯ ಶಹಾದತ್ ನೊಂದಿಗೆ ಮರಣ ಹೊಂದುವ ಸಜ್ಜನರ ಸಾಲಿನಲ್ಲಿ ಅಲ್ಲಾಹು ಸೇರಿಸಲಿ ಎಂದು ಪ್ರಾರ್ಥಿಸಿದರು.

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಪ್ರಯುಕ್ತ ಉಸ್ತಾದ್ ಅನಸ್ ಅಮಾನಿಯವರಿಗೆ ಮೊಮೆಂಟೊ ಹಾಗೂ ಶಾಲು ಹೊದಿಸಿ ಆದರಪೂರ್ವಕ ಸನ್ಮಾನಿಸಲಾಯಿತು.
ಅಕ್ಟೋಬರ್ 13 ಡಿಕೆಯಸ್ಸಿ ಫೌಂಡೇಶನ್ ಅಂಗವಾಗಿ ಸದಸ್ಯತನ ಅಭಿಯಾನ ಫೋರ್ಮ್ ಅನ್ನು ಉಸ್ತಾದ್ ರವರು ಬಿಡುಗಡೆಗೊಳಿಸಿದರು.
ಈ ಶುಭ ಸಂದರ್ಭ ಡಿಕೆಯಸ್ಸಿ ಜುಬೈಲ್ ಘಟಕದ ಅಧ್ಯಕ್ಷ ಅಶ್ರಫ್ ನಾಳ, ಅಬ್ದುಲ್ ಹಮೀದ್ ಉಳ್ಳಾಲ, ಸುಲೈಮಾನ್ ಸೂರಿಂಜೆ, ಜಮಾಲ್ ಕಣ್ಣಂಗಾರ್,ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫೀರ್, ಕೋಶಾಧಿಕಾರಿ ಮುಹಮ್ಮದ್ ಸಾಮಿತ್, ಯೂತ್ ವಿಂಗ್ ಸದಸ್ಯರು, ಫ್ಯಾಮಿಲಿ ಮುಲಾಖಾತ್ 2023 ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಮಲ್ಲೂರು, ಡಿಕೆಯಸ್ಸಿ ದಮ್ಮಾಂ ಘಟಕ ಗೌರವಾಧ್ಯಕ್ಷ ಅಬೂಬಕ್ಕರ್ ಅಜಿಲಮೊಗರು, ಹಾಜರಿದ್ದರು.

error: Content is protected !! Not allowed copy content from janadhvani.com