janadhvani

Kannada Online News Paper

ದುಬೈ : ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಯುಕ್ತ ಜಿ – ಮೀಟ್

ದುಬೈ : ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ತನ್ನ ಐವತ್ತನೇ ವರ್ಷಾಚರಣೆ ಪ್ರಯುಕ್ತ ಇಡೀ ಭಾರತ ದೇಶಾದ್ಯಂತ ಗೋಲ್ಡನ್ ಫಿಫ್ಟಿ ಸಮ್ಮೇಳನ ನಡೆಸುತ್ತಿದ್ದೆ.

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸಮ್ಮೇಳನ ಸೆಪ್ಟೆಂಬರ್ 10 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇದರ ಪ್ರಚಾರ ಪ್ರಯುಕ್ತ ಕೆಸಿಎಫ್ ದುಬೈ ನಾರ್ತ್ ಝೋನ್ ಸಾರಥ್ಯದಲ್ಲಿ ಜಿ – ಮೀಟ್ ಕಾರ್ಯಕ್ರಮ ದುಬೈ ದೇರಾದಲ್ಲಿರುವ ಫ್ಲೋರಿಡಾ ಸಿಟಿ ಹೋಟೆಲ್ ನಲ್ಲಿ ಇತ್ತೀಚಿಗೆ ನಡೆಯಿತು.

ಸೆಯ್ಯಿದ್ ತ್ವಾಹ ತಂಗಳ್ ಸಭೆಗೆ ಪ್ರಾರ್ಥನೆ ಮೂಲಕ ಚಾಲನೆ ಕೊಟ್ಟರು. ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಮದನಿನಗರ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮ ಐಸಿಎಫ್ ದುಬೈ ಸೆಂಟರ್ ಕಾರ್ಯದರ್ಶಿ ಅಶ್ರಫ್ ಪಾಲಕ್ಕಾಡ್ ಉದ್ಘಾಟಿಸಿದರು.

ಎಸ್ಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿ ಎಸ್ ಎಸ್ ಎಫ್ ಸಂಘಟನೆ ಮಾಡುತ್ತಿರುವ ಕ್ರಾಂತಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಅವರು ಗೋಲ್ಡನ್ 50ರ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅವಶ್ಯಕತೆಯಿದೆ ಎಂದರಲ್ಲದೆ ಎಲ್ಲರನ್ನು ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನ ನೀಡಿದರು.

ಕೆಸಿಎಫ್ ಅಂತಾರಾಷ್ಟ್ರೀಯ ಸಂಘಟನ ವಿಭಾಗ ಚೈರ್ಮ್ಯಾನ್ ಅಬ್ದುಲ್ ಜಲೀಲ್ ನಿಝಾಮಿ, ಪಬ್ಲಿಕೇಶನ್ ವಿಭಾಗ ಚೈರ್ಮ್ಯಾನ್ ಕರೀಂ ಮುಸ್ಲಿಯಾರ್,
ಯುಎಇ ರಾಷ್ಟ್ರೀಯ ಸಮೀತಿ ಶಿಕ್ಷಣ ವಿಭಾಗ ಚೈರ್ಮ್ಯಾನ್ ಶಾಹುಲ್ ಹಮೀದ್ ಸಖಾಫಿ, ಕಾರ್ಯದರ್ಶಿ ಮೂಸಾ ಹಾಜಿ ಬಸರ, ಸ್ವಾಗತ ಸಮೀತಿ ಚೈರ್ಮ್ಯಾನ್ ಕಾಸಿಂ ಮದನಿ, ಝೋನ್ ಕೋಶಾಧಿಕಾರಿ ರಫೀಕ್ ಹಾಜಿ ಚಾಮಿಯಾಲ್, ಕಾರ್ಯದರ್ಶಿ ನಿಯಾಜ್ ಬಸರ,
ಮುಂತಾದವರು ಉಪಸ್ಥಿತರಿದ್ದರು.

ಸ್ವಾಗತ ಸಮೀತಿ ಕನ್ವೀನರ್ ಮುಸ್ತಫಾ ಮಾಸ್ಟರ್ ಸ್ವಾಗತಿಸಿದರು ಕಲಂದರ್ ಕಬಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

error: Content is protected !! Not allowed copy content from janadhvani.com